ಬಂಟ್ವಾಳ :ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆಳಗಿನ ತುಂಬೆ ಎಂಬಲ್ಲಿ ಜು 5ರಂದು ಶನಿವಾರ ಮದ್ಯಾಹ್ನ ನಡೆದಿರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಪಾವೂರು ನಿವಾಸಿ ನೌಫಳ್ ಎಂದು ತಿಳಿದುಬಂದಿದೆ. ಇವರು ಶನಿವಾರ ಬೆಳಿಗ್ಗೆ ಬಿ.ಸಿ.ರೋಡ್ ಕೈಕಂಬ ನಿವಾಸಿ ಉಸ್ಮಾನ್ ಎಂಬವರಿಗೆ ಸೇರಿದ ಸ್ವಿಫ್ಟ್ ಕಾರು ಖರೀದಿಸಿ
ಅದನ್ನು ತೆಗೆದುಕೊಂಡು ಹೋಗುವ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.