ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ವತಿಯಿಂದ ಫೆ.6 ರಂದು ಮಂಗಳವಾರ ಕಟೀಲು ಮೇಳದಿಂದ "ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ" 31ನೇ ವರ್ಷದ ಯಕ್ಷಗಾನ ಬಯಲಾಟ ನಡೆಯಲಿದೆ.
ಅಂದು ಸಂಜೆ ಗಂಟೆ 5.30ಕ್ಕೆ ಚೌಕಿ ಪೂಜೆ ಮತ್ತು ರಾತ್ರಿ ಗಂಟೆ 8.30 ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಈ ಪರಿಸರದಲ್ಲಿ ಸಾರ್ವಜನಿಕ ಯಕ್ಷಗಾನ ಮತ್ತಿತರ
ಕಲಾ ಸೇವೆ ನಿರಂತರ ನಡೆಸಲು ಅನುಕೂಲವಾಗುವಂತೆ "ಭ್ರಾಮರಿ" ಕಿರು ಸಭಾಂಗಣ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಭಕ್ತರು ಹೆಚ್ಚಿನ ನೆರವು ನೀಡಿ ಸಹಕರಿಸುವಂತೆ ಸಮಿತಿ ಪ್ರಕಟಣೆ ತಿಳಿಸಿದೆ









