ಫರಂಗಿಪೇಟೆ :ಸೇವಾಂಜಲಿ ಪ್ರತಿಷ್ಠಾನ ವತಿಯಿಂದ 752ನೇ ಉಚಿತ ಕಣ್ಣು-ದಂತ-ವೈದ್ಯಕೀಯ ಶಿಬಿರ.

Coastal Bulletin
ಫರಂಗಿಪೇಟೆ :ಸೇವಾಂಜಲಿ ಪ್ರತಿಷ್ಠಾನ ವತಿಯಿಂದ 752ನೇ ಉಚಿತ ಕಣ್ಣು-ದಂತ-ವೈದ್ಯಕೀಯ ಶಿಬಿರ.

ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ ಇವರ ಆಶ್ರಯದಲ್ಲಿ ಜ। ಕೆ. ಎಸ್ ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಎ.ಬಿ. ಶೆಟ್ಟಿ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸಯನ್ಸ್ ದೇರಳಕಟ್ಟೆ ಇವರ ಸಹಯೋಗದಲ್ಲಿ ಪ್ರತಿ ಮಂಗಳವಾರ ನಡೆಯುವ 752ನೇ ಉಚಿತ ಕಣ್ಣು-ದಂತ-ವೈದ್ಯಕೀಯ ಶಿಬಿರ ಫೆಬ್ರವರಿ 6, 13, 20, 27 ರಂದು ಬೆಳಿಗ್ಗೆ ಗಂಟೆ 9-00ರಿಂದ 1-00ರ ವರೆಗೆ ಫರಂಗಿಪೇಟೆಯ ಸೇವಾಂಜಲಿ ಅರೋಗ್ಯ ಕೇಂದ್ರದಲ್ಲಿ ನಡೆಯಲಿದೆ.

ಈ ಶಿಬಿರದಲ್ಲಿ ಕಣ್ಣಿನ ತಜ್ಞ ವೈದ್ಯರು,ಸಾಮಾನ್ಯ ರೋಗ ತಜ್ಞ ವೈದ್ಯರು,ದಂತ ತಜ್ಞ ವೈದ್ಯರು,ಚರ್ಮ ರೋಗ ತಜ್ಞ ವೈದ್ಯರು,ಮಕ್ಕಳ ತಜ್ಞ ವೈದ್ಯರು,ಸ್ತ್ರೀ ರೋಗ ತಜ್ಞ ವೈದ್ಯರು,ಕಿವಿ, ಮೂಗು, ಗಂಟಲು ತಜ್ಞ ವೈದ್ಯರು ಭಾಗವಹಿಸಲಿರುವರು.

ಈ ಶಿಬಿರದಲ್ಲಿ ರೋಗ ಪತ್ತೆ ಹಚ್ಚಿದಲ್ಲಿ ಆಸ್ಪತ್ರೆ ಯ ಸೌಲಭ್ಯಗಳನ್ನು ಆಸ್ಪತ್ರೆಯ ಕಾರ್ಡಿನ

ಮುಖಾಂತರ ವಿಶೇಷ ರಿಯಾಯಿತಿ ದರದಲ್ಲಿ ಒದಗಿಸುವ ವ್ಯವಸ್ಥೆ ಇದೆ. ಕಣ್ಣಿನ ಶಸ್ತ್ರ ಚಿಕಿತ್ಸೆ, ಹೆರಿಗೆ, ಸಿಜೇರಿಯನ್ ಹೆರಿಗೆ ಮತ್ತು ಸೀಳು ತುಟಿ ವಿಕಲಾಂಗತೆಗಳನ್ನು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುವುದು.

ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಆಡಳಿತ ಟ್ರಸ್ಟಿ ಕೆ. ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment