ಪಾಣೆಮಂಗಳೂರು: ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯ 3ನೇ ಶಾಖೆಯ ಶುಭಾರಂಭ. ಶುಭಾರಂಭದ ಪ್ರಯುಕ್ತ 10 ದಿನ ವಿಶೇಷ ರಿಯಾಯಿತಿ ದರ ಹಾಗೂ ಆಕರ್ಷಕ ಆಫರ್

Coastal Bulletin
ಪಾಣೆಮಂಗಳೂರು: ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯ 3ನೇ ಶಾಖೆಯ ಶುಭಾರಂಭ. ಶುಭಾರಂಭದ ಪ್ರಯುಕ್ತ 10 ದಿನ ವಿಶೇಷ ರಿಯಾಯಿತಿ ದರ ಹಾಗೂ ಆಕರ್ಷಕ ಆಫರ್

ಬಂಟ್ವಾಳ :ತಾಲೂಕಿನ ವಿಶ್ವಾಸಾರ್ಹ ಹಾಗೂ ಗುಣಮಟ್ಟದ ಉತ್ಪನ್ನಗಳ ಮಾರಾಟಕ್ಕೆ ಹೆಸರುವಾಸಿಯಾಗಿರುವ "ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್" ಸಂಸ್ಥೆಯ ನೂತನ ಹಾಗೂ 3ನೇ ಶಾಖೆಯು ಜ. 5ರಂದು ಆದಿತ್ಯವಾರ ಪಾಣೆಮಂಗಳೂರು ಪೇಟೆಯಲ್ಲಿ ಶುಭರಂಭಗೊಂಡಿತು.


ಶ್ರೀ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯು ಕಳೆದ 13 ವರುಷಗಳಿಂದ ನಿರಂತರ ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಉದ್ಯಮ ಕ್ಷೇತ್ರದಲ್ಲಿ ಆಕರ್ಷಕ ದರ ಹಾಗೂ ಗುಣಮಟ್ಟ ಸೇವೆಯನ್ನು ಒದಗಿಸಿ ಯಶಸ್ವಿಯಾಗಿ ಮುನ್ನಡೆಯುತ್ತ, ಮಾಣಿ ಹಾಗೂ ಪಾಣೆಮಂಗಳೂರಿನಲ್ಲಿ ಶಾಖೆಯನ್ನು ಪ್ರಾರಂಭಿಸಿ, ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಬೆಳೆದು ನಿಂತಿದೆ. ಅಲ್ಲದೆ ಫರ್ನಿಚರ್ ಉತ್ಪನ್ನಗಳ ಸ್ವಂತ ತಯಾರಿಕ ಘಟಕವನ್ನು ಕೂಡ ಹೊಂದಿದೆ.


10 ದಿನಗಳ ವಿಶೇಷ ಆಫರಿನ ಸುರಿಮಳೆ:

ಪ್ರತಿ ಹಬ್ಬ ಹರಿದಿನಗಳಿಗೆ ವಿಶೇಷ ಆಫರ್ ನೀಡುವ ಶ್ರೀ

ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಸಂಸ್ಥೆಯು ಈ ಸಲ ನೂತನ ಶಾಖೆಯ ಶುಭಾರಂಭ ಹಾಗೂ ಹೊಸ ವರುಷದ ಪ್ರಯುಕ್ತ 10 ದಿನಗಳ ವಿಶೇಷ ರಿಯಾಯಿತಿ ಹಾಗೂ ಆಫರಿನ ಸುರಿಮಳೆಯನ್ನು ಗ್ರಾಹಕರಿಗೆ ನೀಡುತ್ತಿದೆ. ನಿಮಗಿಷ್ಟವಾದ ಶಾಪಿಂಗ್ ಮಾಡಿ ವರ್ಷಾರಂಭವನ್ನು ಅವಿಸ್ಮರಣೀಯ ವಾಗಿಸಿಕೊಳ್ಳಿ.


ವಿಶೇಷ ಬೆಲೆ, ಉಡುಗೊರೆ, ವಿನಿಮಯ ಕೊಡುಗೆ, ಕಾಂಬಿ ಯೋಜನೆ, ಇ ಎಂ ಐ, ಆಕರ್ಷಕ ಸ್ಕ್ರೀಮ್ ಗಳು ಸೇರಿದಂತೆ ಹಲವು ಕೊಡುಗೆಗಳೊಂದಿಗೆ ನಿಮ್ಮ ನೆಚ್ಚಿನ ವಸ್ತು ವೈವಿದ್ಯಗಳನ್ನು ಖರೀದಿಸಲು ಇಂದೇ ಭೇಟಿ ಕೊಡಿ ಎಂದು ಸಂಸ್ಥೆಯ ಮಾಲಕ ಕರುಣಾಕರ ಕುಲಾಲ್ ವಿನಂತಿಸಿದ್ದಾರೆ.

Leave a Comment