ಮಂಗಳೂರು :ಯುವ ನ್ಯಾಯವಾದಿ ಸುರೇಶ್ ಕುಮಾ‌ರ್ ನಾವೂರು ವಿ ವಿ ಸಿಂಡಿಕೇಟ್‌ ಸದಸ್ಯರಾಗಿ ನೇಮಕ.

Coastal Bulletin
ಮಂಗಳೂರು :ಯುವ ನ್ಯಾಯವಾದಿ ಸುರೇಶ್ ಕುಮಾ‌ರ್ ನಾವೂರು ವಿ ವಿ ಸಿಂಡಿಕೇಟ್‌ ಸದಸ್ಯರಾಗಿ ನೇಮಕ.

ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸದಸ್ಯರಾಗಿ ಯುವ ನ್ಯಾಯವಾದಿ ಸುರೇಶ್ ಕುಮಾ‌ರ್ ನಾವೂರು ಅವರನ್ನು ಸರಕಾರ ನೇಮಕಗೊಳಿಸಿ ಆದೇಶ ಹೊರಡಿಸಿದೆ.

.ಸಿ.ರೋಡಿನಲ್ಲಿ ನೋಟರಿ, ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಕುಮಾ‌ರ್ ನಾವೂರು ಅವರು ದ. ಕ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ವಕೀಲರ ಸಂಘದ ಮಾಜಿ ಉಪಾಧ್ಯಕ್ಷರಾಗಿ, ನಾವೂರೇಶ್ವರ ವಿಷ್ಣುಮೂರ್ತಿ ಸುಬ್ರಾಯ

ದೇವಸ್ಥಾನದ ಟ್ರಸ್ಟಿಯಾಗಿ ,ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕಟ್ಟಡ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಜೆಸಿಐ ಬಂಟ್ವಾಳದ ಪೂರ್ವಾಧ್ಯಕ್ಷರು, ರೋಟರಿ ಕ್ಲಬ್ ಬಂಟ್ವಾಳ ಟೌನ್, ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Comment