ಉಳಾಯಿಬೆಟ್ಟು: ಪ್ರೀತಿ ಗೇಮ್ಸ್ ಕ್ಲಬ್ (ರಿ)ಅಶ್ರಯದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ.

Coastal Bulletin
ಉಳಾಯಿಬೆಟ್ಟು: ಪ್ರೀತಿ ಗೇಮ್ಸ್ ಕ್ಲಬ್ (ರಿ)ಅಶ್ರಯದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ.

ಬಂಟ್ವಾಳ : ಪ್ರೀತಿ ಗೇಮ್ಸ್ ಕ್ಲಬ್ (ರಿ) ಪೆರ್ಮಂಕಿ ,ಕಥೊಲಿಕ್ ಸಭಾ ಫೆರ್ಮಾಯಿ ಘಟಕ, ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಮಟ್ಟದ ಸಹಯೋಗದೊಂದಿಗೆ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮವು ನ. 3ರಂದು ಭಾನುವಾರ ಪೆರ್ಮಂಕಿಯಲ್ಲಿ ಜರಗಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಂಗಳೂರು ಅಂಚೆ ಇಲಾಖೆಯ ನಿರೀಕ್ಷಕರಾದ ಸಿ.ಪಿ. ಹರೀಶ್ ಇವರು ಮಾತನಾಡಿ ಅಂಚೆ ಕಚೇರಿಯಲ್ಲಿ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿದರು. ಮಾರುಕಟ್ಟೆ ಅಧಿಕಾರಿ ಸುಭಾಷ್ ಪಿ. ಸಾಲಿಯಾನ್ ಅಪಘಾತ ವಿಮೆ ಮತ್ತು ಆಧಾರ್ ಕಾರ್ಡಿನ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. 

ಕಾರ್ಯಕ್ರಮದಲ್ಲಿ ಉಳಾಯಿ ಬೆಟ್ಟು ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಹರಿಕೇಶ್ ಶೆಟ್ಟಿ ನಡಿಗುತ್ತು

,ದಿನೇಶ್ ಕುಮಾರ್, ಎನ್. ರವಿರಾಜ್ ರಾವ್, ಧನಂಜಯ, ಪ್ರಶಾಂತ್ ಸಲ್ದಾನ, ಜೀವನ್ ಪಿಂಟೊ, ಕರುಣಾಕರ ಮುಂತಾದವರು ಉಪಸ್ಥಿತರಿದ್ದರು. 

ಶಿಬಿರದ ಮೂಲಕ ಊರಿನ ನಾಗರಿಕರು ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಅಪಘಾತ ವಿಮೆ, ಡಿಜಿಟಲ್ ಖಾತೆ, ಆಧಾರ್ ಮೊಬೈಲ್ ನಂಬರ್ ಜೋಡಣೆ ,ಪಾನ್ ಕಾರ್ಡ್, ಪಾಸ್ ಪೋರ್ಟ್, ಸುಕನ್ಯಾ ಸಮೃದ್ಧಿ ಹಾಗೂ ಇನ್ನಿತರ ಪ್ರಯೋಜನವನ್ನು ಪಡೆದುಕೊಂಡರು. ಕಾರ್ಯದರ್ಶಿ ಶ್ರೀನಾಥ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Leave a Comment