breaking news

ಕೊಡ್ಮಾಣ್ :ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ಕೊಡ್ಮಾಣ್ :ಶ್ರೀ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ :ಶ್ರೀ ಶಾರದಾ ಪೂಜಾ ಸೇವಾ ವೇದಿಕೆ ಕೊಡ್ಮಾಣ್ ಇದರ ಆಶ್ರಯದಲ್ಲಿ ನಡೆಯುವ ಶ್ರೀ ಶಾರದಾ ಪೂಜಾ ಮಹೋತ್ಸವದ ಸೆ.29 ಸೋಮವಾರ ದಿಂದ ಅ.2 ಗುರುವಾರದ ವರೆಗೆ ನಡೆಯಲಿರುವ 37ನೇ ವರ್ಷದ ಶಾರದಾ ಪೂಜಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಲಕ್ಷ್ಮಿಕಾಂತ್ ನಾಯಕ್ ಕೊಡ್ಮಾಣ್ ಹೈಟ್ಸ್ ಇವರು ದೀಪ ಬೆಳಗಿಸಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕೆ ಆರ್ ದೇವದಾಸ್ ಮಾಸ್ಟರ್, ಪದ್ಮನಾಭ ಶೆಟ್ಟಿ ಕೊಟ್ಟಿoಜ, ನವೀನ್ ನಾಯ್ಕ್ ಕೊಡ್ಮಾಣ್, ಶಾರದಾ ಪೂಜಾ ಸೇವಾ ವೇದಿಕೆಯ ಅಧ್ಯಕ್ಷರಾದ

ಪ್ರವೀಣ್ ಶೆಟ್ಟಿ ಪಾಪೆದಡಿ, ಕಾರ್ಯದರ್ಶಿ ಚೇತನ್ ಕಾಂಜಿಲಕೋಡಿ, ಕೋಶಾಧಿಕಾರಿ ಸುರೇಂದ್ರ ಆಳ್ವ ಪೊನ್ನೊಡಿ, ಗೋಪಾಲ್ ಗೋವಿಂತೋಟ ಸಹಿತ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Comment