ಪುದು:ಭಾ ಜ ಪಾ ಮಹಾಶಕ್ತಿ ಕೇಂದ್ರದ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಾಗಾರ.

Coastal Bulletin
ಪುದು:ಭಾ ಜ ಪಾ ಮಹಾಶಕ್ತಿ ಕೇಂದ್ರದ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಾಗಾರ.

ಬಂಟ್ವಾಳ :ಭಾರತೀಯ ಜನತಾ ಪಾರ್ಟಿ ಮಂಗಳೂರು ವಿಧಾನಸಭಾ ಕ್ಷೇತ್ರದ ಪುದು ಮಹಾಶಕ್ತಿಕೇಂದ್ರದ ಅಶ್ರಯದಲ್ಲಿ ಸದಸ್ಯತ್ವ ಅಭಿಯಾನ‌ ಕಾರ್ಯಾಗಾರವು ಸೆ. 3ರಂದು ಮಂಗಳವಾರ‌ ಕಡೆಗೋಳಿ ಕುಲಾಲ ಭವನದಲ್ಲಿ ನಡೆಯಿತು.

ಪುದು ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಜಗನ್ನಾಥ ಸಾಲಿಯಾನ್ ತುಂಬೆ ಮಾತನಾಡಿ‌ ಪ್ರತಿಯೊಬ್ಬ ಕಾರ್ಯಕರ್ತರು ಸದಸ್ಯತ್ವ ಅಭಿಯಾನಕ್ಕೆ‌ ಕೈ ಜೋಡಿಸಿ ಪ್ರತೀ ಬೂತ್ ಗಳಲ್ಲಿ 300ಕ್ಕೂ ಹೆಚ್ಚು ಸದಸ್ಯರನ್ನು‌ ನೊಂದಾಯಿಸುವ ಮೂಲಕ‌ ಅಭಿಯಾನ ಯಶಸ್ವಿಗೊಳಿಸಲು ಸಹಕಾರ ಕೋರಿದರು.

ಸದಸ್ಯತ್ವ ಅಭಿಯಾನದ ಪ್ರಭಾರಿಗಳಾದ ಜಯಶ್ರೀ ಕರ್ಕೇರ ಹಾಗೂ‌ ಭರತ್ ಗಟ್ಟಿ‌ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು. ಸದಸ್ಯತ್ವ ಅಭಿಯಾನದ‌  ಮೂಲಕ ಸದಸ್ಯತ್ವ ನೊಂದಣಿ‌ ಮಾಡುವಂತೆ ಸಲಹೆ‌‌ ನೀಡಿದರು. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ಈ‌ ಮೂಲಕ ಕೊಡುಗೆ ನೀಡುವಂತೆ ವಿನಂತಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ‌ ಆಯ್ಕೆಯಾದ

ಮಹಾಶಕ್ತಿ ಕೇಂದ್ರದ ಪ್ರಮುಖರಿಗೆ , ಬೂತ್ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಿಗೆ ಪಕ್ಷದ ಶಾಲು ಹೊದಿಸಿ ಗೌರವಿಸಲಾಯಿತು.

ಸಭೆಯಲ್ಲಿ ಹಿಂದುಳಿದ‌ ವರ್ಗ ಮೋರ್ಚಾದ‌ ಮಂಡಲ ಅಧ್ಯಕ್ಷ ಗಣೇಶ್ ಸುವರ್ಣ , ಜಿಲ್ಲಾಕಾರ್ಯಕಾರಿಣಿ‌ ಸದಸ್ಯ ಪ್ರವೀಣ್ ಶೆಟ್ಟಿ‌ ಸುಜೀರು , ಜಿಲ್ಲಾ ಎಸ್ಸಿ ಮೋರ್ಚಾದ ಉಪಾಧ್ಯಕ್ಷ ವಿಠಲ ಸಾಲಿಯಾನ್ , ಮಹಾಶಕ್ತಿ‌ಕೇಂದ್ರ ಕಾರ್ಯದರ್ಶಿ‌ ಸುಖೇಶ್ ಶೆಟ್ಟಿ, ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಶಾಂತಾ .ಡಿ ಚೌಟ, ಮಹಾಶಕ್ತಿ ಕೇಂದ್ರದ ಪ್ರಮುಖ್ ಪ್ರೇಮನಾಥ ಕುಕ್ಯಾಡ್ ,ಪಂಚಾಯತ್ ಸದಸ್ಯರು

ಪುದು ಶಕ್ತಿಕೇಂದ್ರದ ಪದಾಧಿಕಾರಿಗಳು , ಪ್ರಮುಖರು ಭಾಗವಹಿಸಿದರು.

Leave a Comment