ಬಂಟ್ವಾಳ :ಎಳೆಯರ ಬಳಗ (ರಿ.) ಹಾಗೂ ಎಳೆಯರ ಬಳಗ ಮಹಿಳಾ ಮಂಡಳಿ ರಾಮಲ್‌ಕಟ್ಟೆ ಇದರ ವಾರ್ಷಿಕ ಪೂಜಾ ಮಹೋತ್ಸವ ಹಾಗೂ ವಾರ್ಷಿಕೋತ್ಸವವು ಜ.6 ಹಾಗೂ 7ರಂದು ನಡೆಯಲಿದೆ.
ಜ.6ರಂದು ಮಂಗಳವಾರ ಸಂಜೆ 7ರಿಂದ ಸ್ಥಳೀಯ ಅರಳು ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿದ್ಯ ಮತ್ತು ಸಂಘದ ಸದಸ್ಯರಿಂದ ಗೌಜಿನ ಗಮ್ಮತ್ ಎಂಬ ವಿಶೇಷ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಜ.7ರಂದು ಬುಧವಾರ ಬೆಳಿಗ್ಗೆ ದೀಪ ಪ್ರಜ್ವಲನೆ, ಗಣಹೋಮ, ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ
ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 7.30 ವಾರ್ಷಿಕೋತ್ಸವ ಸಮಾರಂಭ ನಡೆಯಲಿದ್ದು ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಬಳಿಕ ರಂಗ ತರಂಗ ಕಾಪು ತಂಡದಿಂದ "ಶೋಬಾಜಿ"ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಎಳೆಯರ ಬಳಗದ ಅಧ್ಯಕ್ಷ ಪೂಜೇಶ್ ಆಚಾರ್ಯ ರಾಮಲ್ ಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















