ಇಂದು ಬೆಳ್ತಂಗಡಿ ಉಜಿರೆಯಲ್ಲಿ ಬೃಹತ್ ಜನಾಂದೋಲನ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಸೌಜನ್ಯ ಪರ ಹೋರಾಟಗಾರರು.

Coastal Bulletin
ಇಂದು ಬೆಳ್ತಂಗಡಿ ಉಜಿರೆಯಲ್ಲಿ ಬೃಹತ್ ಜನಾಂದೋಲನ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಸೌಜನ್ಯ ಪರ ಹೋರಾಟಗಾರರು.

ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ಇದರ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.ಧರ್ಮಸ್ಥಳ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರವಾಗಿ ಕೊಲೆಗೈಯಲ್ಪಟ್ಟು ಹನ್ನೆರಡು ವರುಷ ಕಳೆದರೂ ನ್ಯಾಯ ಮಾತ್ರ ಮರೀಚಿಕೆಯಾಗಿದೆ.ಇಂದು ನಡೆದ ಬೃಹತ್ ಸಮಾವೇಶದಲ್ಲಿ ಸೌಜನ್ಯ ಪರ ಹೋರಾಟಗಾರರು ಕೇಂದ್ರ,ರಾಜ್ಯ ಸರಕಾರಗಳ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರರು ಪ್ರಕರಣವನ್ನು ಸಂಪೂರ್ಣವಾಗಿ ತನಿಖಾಧಿಕಾರಿಗಳೇ ಮುಚ್ಚಿರುವುದು ಹಾಗೂ ಇದಕ್ಕೆ ಸರಕಾರವೇ ನೇರ ಹೊಣೆ,ಪ್ರಕರಣವನ್ನು ಆದಷ್ಟು ಬೇಗ ಮರುತನಿಖೆ ನಡೆಸಿ ಇಲ್ಲವಾದಲ್ಲಿ ಶಾಂತಿಯುತವಾದ ಈ ಹೋರಾಟ ಕ್ರಾಂತಿಯುತವಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಂತಹ ಹಲವಾರು ಪ್ರಕರಣಗಳನ್ನು ರಾಷ್ಟ್ರೀಯ ಮಾನವ ಸಂಪನ್ಮೂಲ ಇಲಾಖೆಗೆ ದೂರು ನೀಡಿದ್ದೇವೆ ಅವರು ಇಲ್ಲಿಗೆ ಭೇಟಿ ನೀಡಲಿದ್ದಾರೆ.ನಾವು ಮುಂದಿನ ದಿನಗಳಲ್ಲಿ ದಿಲ್ಲಿ ಚಲೋ,ಬೆಂಗಳೂರು ಚಲೋ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ,ಸೌಜನ್ಯಳ ನ್ಯಾಯಕ್ಕೋಸ್ಕರ ನಾವುಗಳು ಜೈಲು ಸೇರಲೂ ತಯಾರಾಗಿದ್ದೇವೆ ಎಂದು ಗುಡುಗಿದರು.

ಬೆಳ್ತಂಗಡಿ,ಪುತ್ತೂರು ಶಾಸಕರುಗಳು ಬೇರೆ ಬೇರೆ ಪಕ್ಷದವರಾಗಿದ್ದರೂ ಬೆಂಗಳೂರಿನಲ್ಲಿ

ಇವರೆಲ್ಲಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಇವರೆಲ್ಲಾ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸೌಜನ್ಯ ಪ್ರಕರಣವನ್ನು ಸಿಬಿಐ ತೀರ್ಪಿನಂತೆ ಮರುತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಎಲ್ಲಾ ಅವಕಾಶ ಇದ್ದರೂ ಕೂಡ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.ಇದೇ ವೇಳೆ ಸೌಜನ್ಯಳಿಗೆ ನ್ಯಾಯಕ್ಕೋಸ್ಕರ ರಾಜ್ಯ ವ್ಯಾಪಿ ಬೃಹತ್ ರಕ್ತ ಹಸ್ತಾಕ್ಷರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ವೇದಿಕೆಯಲ್ಲಿ ಹೋರಾಟ ಪ್ರಮುಖರಾದ ಮಹೇಶ್ ಶೆಟ್ಟಿ ತಿಮರೋಡಿ,ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ,ತಮ್ಮಣ್ಣ ಶೆಟ್ಟಿ,ಗಿರೀಶ್ ಮಟ್ಟಣ್ಣನವರ್,ಸೌಜನ್ಯ ತಾಯಿ ಕುಸುಮಾವತಿ ಅವರು ಭಾಗವಹಿಸಿದ್ದರು.

Leave a Comment