Coastal Bulletin

ಬಂಟ್ವಾಳ :ಇಲ್ಲಿನ ಪುರಾಣ ಪ್ರಸಿದ್ಧ ಬಂಟ್ವಾಳ ಕಾರಿಂಜೇಶ್ವರ ಮಹತೋಭಾರ ದೇವಸ್ಥಾನದ ಅಂಗಣದಲ್ಲಿ ಅನ್ಯ ಧರ್ಮದ ಕಿಡಿಗೇಡಿ ಯವಕರ ತಂಡವೊಂದು ಪಾದರಕ್ಷೆ ಸಹಿತ ಓಡಾಡಿದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ. ಈ ಘಟನೆ ಖಂಡನೀಯವಾಗಿದ್ದು, ಕಿಡಿಗೇಡಿಗಳನ್ನು ಮೂರು ದಿನಗಳ ಒಳಗೆ ಬಂಧಿಸಬೇಕು ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಶೆಟ್ಟಿ ಆಗ್ರಹಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಾಜದ ಶಾಂತಿ ಕದಡಿಸಲು ಉದ್ದೇಶಪೂರ್ವಕವಾಗಿ ಈ ವಿಕೃತಿ ಮೆರೆದ ಚಿತ್ರ ವೈರಲ್ ಮಾಡಿದ್ದಾರೆ. ಕಾರಿಂಜ, ನರಹರಿ ಪರ್ವತ ಪ್ರದೇಶಗಳಿಗೆ ಮೋಜು ಮಸ್ತಿಗೆ ಬರುವವರಿಗೆ ಕಡಿವಾಣ ಹಾಕಬೇಕು. ಇಲ್ಲಿ ಪೊಲೀಸ್ ಔಟ್

ಪೋಸ್ಟ್ ಸದೃಢಗೊಳಿಸಬೇಕು ಎಂದು ಅವರು ಆಗ್ರಹಿಸಿದರು. 

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ ನೆತ್ತರಕೆರೆ, ಬಂಟ್ವಾಳ ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಪ್ರಮುಖರಾದ ವಕೀಲ ರಾಜೇಶ್ ಬೊಳ್ಳುಕಲ್ಲು, ಬಾಲಕೃಷ್ಣ ಕಲಾಯಿ, ಶರತ್, ನವೀನ್ ವಗ್ಗ, ಯೋಗೀಶ್ ಕುಮ್ಡೇಲ್, ರವಿ ಕೆಂಪುಗುಡ್ಡೆ, ಶರ್ಮಿತ್ ಇದ್ದರು.

Leave a Comment