ಬಂಟ್ವಾಳ :ಬ್ರಹ್ಮಶ್ರೀ ನಾರಾಯಣ ಗುರು ವೇದಿಕೆ ಹಾಗೂ ಮಹಿಳಾ ವೇದಿಕೆ ಪುದು ಇದರ 13 ನೇ ವರ್ಷದ ಕಾರ್ಯಕ್ರಮ ಹಾಗೂ ಶ್ರೀ ನಾರಾಯಣ ಗುರುಗಳ 172 ನೇ ಜನ್ಮ ಜಯಂತಿ ಆಚರಣೆ ಅ.04 ರಂದು ಕುಮ್ಡೇಲ್ ಗುರು ಸದನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ,
ಸಾಧಕರಿಗೆ ಸನ್ಮಾನ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಸಮಿತಿಯ ಪ್ರಕಟಣೆ ತಿಳಿಸಿದೆ.











