ಉತ್ತಮ ಕಾರ್ಯಕ್ರಮ ಸಂಘಟಿಸಿದ ತುಂಬೆ ಗ್ರಾ ಪಂ ಗೆ ಸ್ವಚ್ಛತಾ ಹಿ ಸೇವಾ ಆಂದೋಲನ ಪುರಸ್ಕಾರ.

Coastal Bulletin
ಉತ್ತಮ ಕಾರ್ಯಕ್ರಮ ಸಂಘಟಿಸಿದ ತುಂಬೆ ಗ್ರಾ ಪಂ ಗೆ ಸ್ವಚ್ಛತಾ ಹಿ ಸೇವಾ ಆಂದೋಲನ ಪುರಸ್ಕಾರ.

ಬಂಟ್ವಾಳ :ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯವು ಎಲ್ಲಾ ಗ್ರಾಮಗಳಲ್ಲಿ ದೃಶ್ಯ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ 17 ನೇ ಸೆಪ್ಟೆಂಬರ್ 2024 ರಿಂದ 02 ನೇ ಅಕ್ಟೋಬರ್ 2024 ರವರೆಗೆ 'ಸ್ವಚ್ಛತಾ ಹೀ ಸೇವಾ ಆಂದೋಲನ' ವನ್ನು ಹಮ್ಮಿಕೊಂಡಿದ್ದು,ಈ ಕಾರ್ಯಕ್ರಮವನ್ನು ಉತ್ತಮವಾಗಿ ಸಂಘಟಿಸಿದ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಪಂಚಾಯತ್ ಸ್ವಚ್ಛತಾ ಹಿ ಸೇವಾ ಆಂದೋಲನ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಗ್ರಾಮ ಪಂಚಾಯತ್ ನ ಓರ್ವ ಅಧಿಕಾರಿಯನ್ನು  ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳು ಸೆ.2ರ ಗಾಂಧಿ ಜಯಂತಿಯಂದು ಪುರಸ್ಕಾರ ನೀಡಿ ಗೌರವಿಸಿದೆ. ತುಂಬೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವುಲಾಲ್ ಚೌಹಾಣ್ ಪುರಸ್ಕಾರ ಸ್ವೀಕರಿಸಿದರು.


ಸ್ವಚ್ಛತಾ ಹೀ ಸೇವಾ 2024 ರ ಉತ್ತಮವಾಗಿ ಕಾರ್ಯಕ್ರಮಗಳನ್ನು ಸಂಘಟಿಸಲು ಸ್ವಚ್ಛತಾ ಸೇವೆಯ ಯಶಸ್ವಿಗೆ ಹಾಗೂ ತುಂಬೆ ಗ್ರಾಮ ಪಂಚಾಯತ್ ಗೆ ಪ್ರಶಸ್ತಿ ಲಭಿಸಲು

ಕಾರಣಿಕರ್ತರಾದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳು ಎಲ್ಲಾ ಗೌರವಾನ್ವಿತ ಸದಸ್ಯರು, ಗ್ರಾಮ ಪಂಚಾಯತ್ ನ ಎಲ್ಲಾ ಸಿಬ್ಬಂದಿ ವರ್ಗ, ಎಲ್ಲಾ ಇಲಾಖಾ ಅಧಿಕಾರಿಗಳು , ಎಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು , ಸಹಕಾರ ನೀಡಿದ ಆಶಾ ಕಾರ್ಯಕರ್ತೆಯರು ,ಅಂಗನವಾಡಿ ಕಾರ್ಯಕರ್ತೆಯರು ,ಊರಿನ ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಊರಿನ ಎಲ್ಲಾ ಪ್ರಜ್ಞಾವಂತ ನಾಗರಿಕರಿಗೆ ತುಂಬೆ ಗ್ರಾ ಪಂ ನ ಅಧ್ಯಕ್ಷರು,ಉಪಾಧ್ಯಕ್ಷರು,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ.

Leave a Comment