ತುಂಬೆ :ಗ್ರಾ ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮಾಹಿತಿ ಕಾರ್ಯಾಗಾರ.

Coastal Bulletin
ತುಂಬೆ :ಗ್ರಾ ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮಾಹಿತಿ ಕಾರ್ಯಾಗಾರ.

ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ನ ಸಭಾಂಗಣದಲ್ಲಿ ಭಾರತ ಸರಕಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಮಾಹಿತಿ ಕಾರ್ಯಾಗಾರವು ಬ್ಯಾಂಕ್‌ ಆಫ್‌ ಬರೋಡ ತುಂಬೆ ಹಾಗೂ ತುಂಬೆ ಗ್ರಾ ಪಂ ಸಂಯುಕ್ತ ಆಶ್ರಯದಲ್ಲಿ ಡಿ 1ರಂದು ಸೋಮವಾರ ಮಧ್ಯಾಹ್ನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಂಬೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಜಯಂತಿ ಕೇಶವ ರವರು ವಹಿಸಿಕೊಂಡಿದ್ದರು.ಬ್ಯಾಂಕ್‌ ಆಫ್‌ ಬರೋಡದ ವ್ಯವಸ್ಥಾಪಕರಾದ ಸ್ನೇಹರಾಜ್‌ ರವರ ಉಪಸ್ಥಿತಿಯಲ್ಲಿ ಸಂಪನ್ಮೂಲ ವ್ಯಕ್ತಿ ಸುಮಿತ್‌ ಶೆಟ್ಟಿ ಕೇಂದ್ರ ಸರಕಾರದ ಯೋಜನೆಗಳ ಸಮಗ್ರ ಮಾಹಿತಿ ನೀಡಿದ್ದರು.

2022-2023 ನೇ ಸಾಲಿನ ಎಸ್‌.ಎಸ್.ಎಲ್‌. ಸಿ. ಮತ್ತು ಪಿ .ಯು. ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ರಕ್ಷಾ ಮತ್ತು ಶ್ರೀನಿಧಿ ಯವರನ್ನು ಸ್ಮರಣಿಕೆ ಶಾಲು ಮತ್ತು ಗೌರವ ಧನ ನೀಡಿ ಸನ್ಮಾನಿಸಲಾಯಿತ್ತು. ವಿವಿಧ ಕ್ಷೇತ್ರದ ಸಾಧಕರಾದ, ಕೃಷಿ ತೆಂಗು ಅಡಿಕೆಯಲ್ಲಿ ದೇವದಾಸ

ಶೆಟ್ಟಿ ತುಂಬೆ ಗುತ್ತು ಹೈನುಗಾರಿಕೆ ರಾಜೀವ ಕೋಂ ಪದ್ಮನಾಭ ಹೊಸಹಿತ್ಲು, ಭತ್ತದ ಕೃಷಿ ಕೇಶವ ಗಟ್ಟಿ ಪರ್ಲಕ್ಕೆ ,ಉದ್ಯಮೆ ಕ್ಷೇತ್ರದಲ್ಲಿ ಶೋಭಾ ಕೋಂ ಜಗದೀಶ ಶೆಟ್ಟಿ ಇವರಿಗೆ ಸ್ಮರಣಿಕೆ ಶಾಲು ನೀಡಿ ಗೌರವಿಸಲಾಯಿತು.

ಉಪಾಧ್ಯಕ್ಷರಾದ ಗಣೇಶ ಸಾಲಿಯಾನ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಗ್ರಾ ಪಂ ಅಭಿವೃದ್ದಿ ಅಧಿಕಾರಿ ಶಿವುಲಾಲ್‌ ಚವ್ಹಾಣ್‌ ಉಪಸ್ಥಿತರಿದ್ದರು.ನಿಕಟಪೂರ್ವ ಅಧಕ್ಷ ಪ್ರವೀಣ್‌ ಬಿ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್‌ ಸದಸ್ಯರಾದ ಹೇಮಲತಾ ಜಿ ಪೂಜಾರಿ ಇಬ್ರಾಹಿಂ ಮಹಮ್ಮದ್‌ ಝಹೂರ್‌ ಜಯಂತಿ ನಾಗೇಶ್‌ ಆತಿಕಾಬಾನು ಉಪಸ್ಥಿತರಿದ್ದರು.

ಪಂಚಾಯತ್‌ ಸಿಬ್ಬಂದಿ ಪೂರ್ಣಿಮಾ ಪ್ರಾರ್ಥಿಸಿ, ಚಂದ್ರಕಲಾ ಸ್ವಾಗತಿಸಿ, ಪ್ರಮೀಳಾ ವಂದಿಸಿದರು.

Leave a Comment