ಕಳ್ಳಿಗೆ : ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ) 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವದ ಸಮಾಲೋಚನಾ ಸಭೆ. ನೂತನ ಸಮಿತಿ ರಚನೆ,

Coastal Bulletin
ಕಳ್ಳಿಗೆ : ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ) 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವದ ಸಮಾಲೋಚನಾ ಸಭೆ. ನೂತನ ಸಮಿತಿ ರಚನೆ,

ಬಂಟ್ವಾಳ :ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ ) ಕಳ್ಳಿಗೆ ಇದರ ಆಶ್ರಯದಲ್ಲಿ ಜರಗುವ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವದ ಸಮಾಲೋಚನಾ ಸಭೆಯು ದೇವಾಂದಬಿಟ್ಟು ಶ್ರೀಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನದ ರಾಜಾಂಗಣದಲ್ಲಿ ಸೆ. 1ರಂದು ಆದಿತ್ಯವಾರ ಜರುಗಿತು.

ಈ ಸಂದರ್ಭದಲ್ಲಿ 23ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಯಶಸ್ವೀಗಾಗಿ ನೂತನ ಸಮಿತಿಯನ್ನು ರಚಿಸಲಾಯಿತು.


ಅದ್ಯಕ್ಷರಾಗಿ ಸುಧೀಂದ್ರ ಆಯರೆಗುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಶೆಟ್ಟಿ ಪೆರಿಯೋಡಿ ಬೀಡು, ಕೋಶಾಧಿಕಾರಿ ಯೋಗೀಶ್

ದರಿಬಾಗಿಲು (ಶ್ರೇಯಾ ಸ್ಟುಡಿಯೋ) ಮತ್ತು ಉಪಾಧ್ಯಕ್ಷರು ಹಾಗೂ ಜೊತೆ ಕಾರ್ಯದರ್ಶಿಗಳನ್ನು ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಕಾರ್ಯಕರ್ತರು ಅನೇಕ ಸಲಹೆ ಸೂಚನೆಗಳನ್ನು ನೀಡಿ, ಶ್ರೀ ಶಾರದಾ ಪೂಜಾ ಮಹೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸುವುದೆಂದು ತೀರ್ಮಾನಿಸಲಾಯಿತು

Leave a Comment