ಕಡೇಶ್ವಾಲ್ಯ: ಡಿ-6 ಸರ್ಕಾರಿ ಶಾಲೆಯಲ್ಲಿ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನ.

Coastal Bulletin
ಕಡೇಶ್ವಾಲ್ಯ: ಡಿ-6 ಸರ್ಕಾರಿ ಶಾಲೆಯಲ್ಲಿ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನ.

ಬಂಟ್ವಾಳ:ಇಲ್ಲಿನ ಮಕ್ಕಳ ಕಲಾ ಲೋಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 17ನೇ ಮಕ್ಕಳ ಸಾಹಿತ್ಯ ಸಮ್ಮೇಳನವು ಇದೇ 6ರಂದು ಬೆಳಿಗ್ಗೆ 9 ಗಂಟೆಗೆ ಕಡೇಶ್ವಾಲ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಸುವರ್ಣ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ರಮೇಶ ಎಂ.ಬಾಯಾರು ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಅಂದು ಬೆಳಿಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್.ರಾವ್ ಮೆರವಣಿಗೆ ಉದ್ಘಾಟಿಸಲಿದ್ದು, ಶಾಲಾಭಿವೃದ್ಧಿ ಸಮಿತಿ ಕಾರ್ಯಧ್ಯಕ್ಷ ಹರಿಶ್ಚಂದ್ರ ಎಂ. ಕನ್ನಡ ಧ್ವಜಾರೋಹಣ ನೆರವೇರಿಸುವರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಪರಿಷತ್ತಿನ ಧ್ವಜಾರೋಹಣ ಮತ್ತು ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಶ್ರುತಿಕಾ ಬಾಕಿಮಾರು ಸಮ್ಮೇಳನ ಉದ್ಘಾಟಿಸುವರು ಎಂದರು.

 ಒಟ್ಟು 400 ಶಾಲೆಗಳಿಂದ ಸುಮಾರು 1ಸಾವಿರಕ್ಕೂ ಮಿಕ್ಕಿ ಮಂದಿ ಸಾಹಿತ್ಯಾಸಕ್ತ ವಿದ್ಯಾರ್ಥಿ ಗಳು ಭಾಗವಹಿಸಲಿದ್ದು, ಆಸಕ್ತರು ಮೊಬೈಲ್ ಸಂಖ್ಯೆ: 9731444259 ಅಥವಾ 9741365132 ಇವರಿಗೆ ಕರೆ

ಅಥವಾ ಸಂದೇಶ ಮೂಲಕ ಸಂಪರ್ಕಿಸುವಂತೆ ಅವರು ವಿನಂತಿಸಿಕೊಂಡರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಸ್ವರಚನೆ, ಆಶು ಮಾತು ಕತೆ, ಚಿತ್ತ ಚಿತ್ತಾರ, ಕವಿ ವಿಶ್ವನಾಥ ಕುಲಾಲ್ ಮಿತ್ತೂರು ಇವರಿಂದ ಪುಸ್ತಕ ಬಿಡುಗಡೆ, ಕಿರು ನಾಟಕ, ಕಲಾವಿದ ರಾಜೇಶ ವಿಟ್ಲ ಇವರಿಗೆ ಬಾಲಬಂಧು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಕೆ.ಕೆ.ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಲಾಭಿವೃದ್ಧಿ ಸಮಿತಿ ಕಾಯರ್ಾಧ್ಯಕ್ಷ ಹರಿಶ್ಚಂದ್ರ ಎಂ., ಮುಖ್ಯಶಿಕ್ಷಕ ಬಾಬು ಪೂಜಾರಿ ಕೆ., ಮಾಧವ ರೈ ಬಂಡಸಾಲೆ, ಶಿವರಾಮ ಭಟ್ ನೆಡ್ಲೆ, ವಿದ್ಯಾಧರ ರೈ, ಶರತ್ ಕುಮಾರ್, ಪುಷ್ಪ ಎಚ್. ಇದ್ದರು.

Leave a Comment