ಕಳ್ಳಿಗೆ:ಶ್ರೀ ಶಾರದಾ ಪೂಜಾ ರಜತ ಮಹೋತ್ಸವದ ಸಿದ್ಧತೆಗೆ ಚಾಲನೆ. ದರಿಬಾಗಿಲಿನಲ್ಲಿ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ.

Coastal Bulletin
ಕಳ್ಳಿಗೆ:ಶ್ರೀ ಶಾರದಾ ಪೂಜಾ ರಜತ ಮಹೋತ್ಸವದ ಸಿದ್ಧತೆಗೆ ಚಾಲನೆ. ದರಿಬಾಗಿಲಿನಲ್ಲಿ ಮಹೋತ್ಸವದ ಕಾರ್ಯಾಲಯ ಉದ್ಘಾಟನೆ.

ಬಂಟ್ವಾಳ: ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ.), ಕಳ್ಳಿಗೆ ಇದರ ಆಶ್ರಯದಲ್ಲಿ ಅ. 16ರಿಂದ 18ರವರೆಗೆ ನಡೆಯಲಿರುವ 25ನೇ ವರ್ಷದ ಸಂಭ್ರಮದ “ಶ್ರೀ ಶಾರದಾ ಪೂಜಾ ರಜತ ಮಹೋತ್ಸವ”ದ ಪೂರ್ವಭಾವಿಯಾಗಿ ದರಿಬಾಗಿಲಿನಲ್ಲಿ ಮಹೋತ್ಸವದ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.

ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್ ಅವರು ದೀಪ ಬೆಳಗಿಸಿ ಕಾರ್ಯಾಲಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾರದಾ ಪೂಜಾ ಮಹೋತ್ಸವವು ಧಾರ್ಮಿಕ ಆಚರಣೆಯ ಜೊತೆಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಜನರನ್ನು ಒಗ್ಗೂಡಿಸುವ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

25ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆಗಳು ನಡೆಯುತ್ತಿದ್ದು, ಮಹೋತ್ಸವವನ್ನು ಯಶಸ್ವಿಗೊಳಿಸಲು

ಸಾರ್ವಜನಿಕರು ಹಾಗೂ ಭಕ್ತರು ಸಹಕರಿಸುವಂತೆ ಸಂಸ್ಕೃತಿ ಸೇವಾ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷ ಪುರುಷ ಎನ್. ಸಾಲಿಯಾನ್ ವಿನಂತಿಸಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಗಣೇಶ್ ಕರ್ಕೇರ ದರಿಬಾಗಿಲು, ಸಂತೋಷ ದೇವಂದಬೆಟ್ಟು, ಸುಧೀರ್ ಜಾರಂದಗುಡ್ಡೆ, ಶ್ರೀಕಾಂತ್ ದರಿಬಾಗಿಲು, ಜಗದೀಶ ಕಂಜತ್ತೂರು, ಪ್ರಶಾಂತ ಕನಪಾಡಿ, ಸಂದೇಶ್ ದರಿಬಾಗಿಲು, ಹರೀಶ್ ಚಂದ್ರಿಗೆ, ನಾಗೇಶ್ ದರಿಬಾಗಿಲು ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Comment