ಬಂಟ್ವಾಳ :ಇಲ್ಲಿನ ರಾಯಿ ಗ್ರಾಮದ ಸಾಲುಕೋಡಿ ನಿವಾಸಿ, ಹಿರಿಯ ಕಾಷ್ಠಶಿಲ್ಪಿ ಅಪ್ಪು ಆಚಾರ್ಯ ರಾಯಿ(82) ಇವರು ಹೃದಯಾಘಾತದಿಂದ ಭಾನುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ರಾಯಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ
ಸಹಿತ ಐವರು ಪುತ್ರಿಯರು ಇದ್ದಾರೆ. ಮೃತರು ಪ್ರಗತಿಪರ ಕೃಷಿಕರಾಗಿ, ಹಿರಿಯ ಕಾಷ್ಠಶಿಲ್ಪಿ ಯಾಗಿ, ಸರಳ ಸಜ್ಜನಿಕೆಯಿಂದಲೇ ಗುರುತಿಸಿಕೊಂಡಿದ್ದರು.
















