ಬಂಟ್ವಾಳ: 'ಕೃಷಿಕ ಸಮಾಜ ಭವನ' ಲೋಕಾರ್ಪಣೆ 'ಕೃಷಿಕರಿಂದ ಸಮೃದ್ಧ ಸಮಾಜ ನಿರ್ಮಾಣ': ಬಿ.ರಮಾನಾಥ ರೈ

Coastal Bulletin
ಬಂಟ್ವಾಳ: 'ಕೃಷಿಕ ಸಮಾಜ ಭವನ' ಲೋಕಾರ್ಪಣೆ 'ಕೃಷಿಕರಿಂದ ಸಮೃದ್ಧ ಸಮಾಜ ನಿರ್ಮಾಣ': ಬಿ.ರಮಾನಾಥ ರೈ

ಬಂಟ್ವಾಳ:ಸಮಾಜದಲ್ಲಿ ಕೃಷಿಕರ ಅವಿರತ ದುಡಿಮೆಯಿಂದ ಸಮೃದ್ಧ ಸಮಾಜ ನಿಮರ್ಿಸಲು ಸಹಕಾರಿಯಾಗುತ್ತದೆ. ಕೃಷಿ ಇಲಾಖೆ ಮೂಲಕ ಸಕರ್ಾರ ನೀಡುವ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಕೂಡಾ ಕೃಷಿಕ ಸಮಾಜದ ಅಗತ್ಯವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡಿನಲ್ಲಿ ಕೃಷಿಕ ಸಮಾಜ ಇದರ ವತಿಯಿಂದ ಸೋಮವಾರ ನಡೆದ 'ಕೃಷಿಕ ಸಮಾಜ ಭವನ' ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿಕ ಸಮಾಜ ರಾಜ್ಯ ಸಮಿತಿ ಅಧ್ಯಕ್ಷ ಮಂಜುನಾಥ ಗೌಡ ಎಸ್.ಆರ್. ಮಾತನಾಡಿ, ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿವುದು ರಾಜ್ಯಕ್ಕೆ ಹೆಮ್ಮೆ. ಈ ಕಟ್ಟಡದ ಕಾಮಗಾರಿ ಪೂರ್ಣಗೊಳಿಸಲು ಮತ್ತಷ್ಟು ಅನುದಾನ ಅಥವಾ ಬಡ್ಡಿ ರಹಿತ ಸಾಲ ಒದಗಿಸುವ ಬಗ್ಗೆ ಪ್ರಯತ್ನಿಸುವುದಾಗಿ ತಿಳಿಸಿದರು.

 ವಿಧಾನಪರಿಷತ್ ಸದಸ್ಯ ಬಿ.ಮಂಜುನಾಥ ಭಂಡಾರಿ ಮಾತನಾಡಿ, ಸರ್ಕಾರ ಮತ್ತು ಫಲಾನುಭವಿಗಳ ಮಧ್ಯೆ ಕೃಷಿಕ ಸಮಾಜ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದರು. 

ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್. ಗಟ್ಟಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವಿಜಯ ಕುಮಾರ್ ರೈ, ಉಪಾಧ್ಯಕ್ಷ ಚಂದ್ರ ಕೊಲ್ಚಾರ್ ಶುಭ ಹಾರೈಸಿದರು.

ಬೂಡ ಅಧ್ಯಕ್ಷ ಬೇಬಿ ಕುಂದರ್, ತುಳು ಸಾಹಿತ್ಯ ಅಕಾಡೆಮಿ

ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಪುರಸಭಾಧ್ಯಕ್ಷ ವಾಸು ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್, ಕೃಷಿ ಸಹಾಯಕ ನಿದರ್ೇಶಕಿ 

ವೀಣಾ ಕೆ. ಆರ್., ತೋಟಗಾರಿಕೆ ಸಹಾಯಕ ನಿದರ್ೇಶಕ ಜೋ. ಪ್ರದೀಪ್ ಡಿಸೋಜ, ಪದಾಧಿಕಾರಿಗಳಾದ ಆಲ್ಬಟರ್್ ಮಿನೇಜಸ್, ರಮಾನಾಥ ವಿಟ್ಲ, ಗಣೇಶ ಶೆಟ್ಟಿ ಗೋಳ್ತಮಜಲು, ಬದ್ರುದ್ದೀನ್ ಮಂಚಿ, ರಮೇಶ ನೆಟ್ಲ, ರೆಹ್ಮತುಲ್ಲಾ, ದೇವದಾಸ ರೈ, ಎಸ್.ಎನ್.ಹೊಳ್ಳ, ಮಹಮ್ಮದ್ ನಂದರಬೆಟ್ಟು, ವಿಶ್ವನಾಥ ನಾಯ್ಕ್, ಮೋಹನ ಆಚಾರ್ಯ ಮತ್ತಿತರರು ಇದ್ದರು.   

ಕೃಷಿಕ ಸಮಾಜ ಅಧ್ಯಕ್ಷ ಎಂ. ಪದ್ಮರಾಜ್ ಬಲ್ಲಾಳ್ ಸ್ವಾಗತಿಸಿ, ಕಟ್ಟಡ ಸಮಿತಿ ಅಧ್ಯಕ್ಷ ಕೆ. ಪದ್ಮನಾಭ ರೈ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಉಮ್ಮರ್ ಮಂಚಿ ವಂದಿಸಿದರು. ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು. 


Leave a Comment