ಬಂಟ್ವಾಳ: ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ಹಿಂದು ಜಾಗರಣಾ ವೇದಿಕೆ ಬಂಟ್ವಾಳ ಮತ್ತು ವಿಟ್ಲ ತಾಲೂಕು ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಶುಕ್ರವಾರ ರಾತ್ರಿ ಸುರಿಯುವ ಮಳೆಯಲ್ಲಿಯೂ ಪಂಜಿನ ಮೆರವಣಿಗೆಯನ್ನು ನಡೆಸಲಾಯಿತು. ಬಿ.ಸಿ.ರೋಡಿನ ನಾರಾಯಣಗುರು ವೃತ್ತದಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಬಳಿಕ ಬಸ್ ತಂಗುದಾಣದ ಮುಂಭಾಗ ಸಂಪನ್ನಗೊಂಡಿತು.
ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಹಿ.ಜಾ.ವೇ.ಪ್ರಮುಖರಾದ ರಾಧಕೃಷ್ಣ ಅಡ್ಯಂತಾಯ,ನರಸಿಂಹ ಮಾಣಿ ಅವರು ಮಾತನಾಡಿ ಕನ್ಹಯ್ಯ ಲಾಲ್ ಹಂತಕರಿಗೆ ಗಲ್ಲು ಶಿಕ್ಷೆ ನೀಡಬೇಕು,ಇಂತಹ ರಾಕ್ಷಸಿ ಕೃತ್ಯ ಮುಂದಿನ ದಿನಗಳಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.
ಹಿಂದೂ ಜಾಗರಣಾ ವೇದಿಕೆಯ ಬಂಟ್ವಾಳ ಮತ್ತು ವಿಟ್ಲ ತಾಲೂಕಿನ ಪ್ರಮುಖರಾದ
ರವಿರಾಜ್ ಬಿ.ಸಿ.ರೋಡ್,ಜಗದೀಶ್ ನೆತ್ತರಕೆರೆ, ತಿರುಲೇಶ್ ಬೆಳ್ಳೂರು,ರತ್ನಾಕರ ಶೆಟ್ಟಿ ಕಲ್ಲಡ್ಕ,ಪ್ರಶಾಂತ್ ಕೆಂಪುಗುಡ್ಡೆ,,ಬಿಜೆಪಿ ಮುಖಂಡರಾದ ಡೊಂಬಯ್ಯ ಅರಳ,ಪ್ರಭಾಕರ ಪ್ರಭು ಕರ್ಪೆ,ಜಿ.ಕೆ.ಭಟ್, ಸುಲೋಚನಾ ಭಟ್, ಸಂಜೀವಪೂಜಾರಿ ಪಿಲಿಂಗಾಲು,ಚಂದ್ರಶೇಖರ ಪೂಜಾರಿ ವೀರಕಂಭ,ದಿನೇಶ್ ದಂಬೆದಾರ್,ಉಮೇಶ್ ಅರಳ ಪುಷ್ಪರಾಜ್,ಕೇಶವ ದೈಪಲ, ಶಂಕರ ಶೆಟ್ಟಿ, ಅರುಣ್ ಸಜಿಪ, ಸತೀಶ್ ಪ್ರಭು ಮೊದಲಾದವರಿದ್ದರು.
















