ಬಂಟ್ವಾಳ: ವಿಶ್ವಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಲಾಲ್ ಅವರನ್ನು ಪೈಶಾಚಿಕವಾಗಿ ಹತ್ಯೆಗೈದ ಭಯೋತ್ಪಾದಕ ಆರೋಪಿಗಳಿಗೆ ಗಲ್ಲು ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿ ಬಿ.ಸಿ.ರೋಡಿನ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ,ವಕೀಲರಾದ ಪ್ರಸಾದ್ ಕುಮಾರ್ ರೈ ಮಾತನಾಡಿ, ಹಂತಕರಿಗೆ ಗಲ್ಲು ಶಿಕ್ಷೆ ನೀಡುವುದರ ಜೊತೆಗೆ, ಇದರ ಹಿಂದಿರುವ ಕೈವಾಡವನ್ನು ಬಯಲಿಗೆಳೆಯಬೇಕು ಹಾಗೂ ಅವರಿಗೆ ಸಹಕಾರ ನೀಡಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಮಟ್ಟ ಹಾಕುವುದಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.ಇದೇವೇಳೆ ಪ್ರತಿಭಟನಾಕಾರರು
ಹಂತಕರಿಬ್ಬರ ಪ್ರತಿಕೃತಿಯನ್ನು ದಹನ ಮಾಡಿದರು.
ಜಿಲ್ಲಾ ಸಹಸಂಚಾಲಕ ಗುರುರಾಜ್ ಬಂಟ್ವಾಳ, ವಿಶ್ವಹಿಂದೂ ಪರಿಷತ್ ಕಾರ್ಯದರ್ಶಿ ದೀಪಕ್ ಅಜೆಕಲ, ಭಜರಂಗದಳ ಸಂಚಾಲಕ ಶಿವಪ್ರಸಾದ್ ತುಂಬೆ, ಸಹಸಂಚಾಲಕ ಸಂತೋಷ್ ಕುಲಾಲ್ ಸರಪಾಡಿ, ಸೇವಾ ಪ್ರಮುಖ್ ಕಿರಣ್ ಕಾಫಿಕಾಡ್, ಪ್ರಸಾದ್ ಬೆಂಜನಪದವು, ವಿನೀತ್ ತುಂಬೆ, ಸಂದೀಪ್ ದರ್ಬಳಿಕೆ, ಲೋಕೇಶ್ ಪಲ್ಲಿಪಾಡಿ, ಸಂದೇಶ್ ಕಾಡುಬೆಟ್ಟು, ದಿನೇಶ್ ದಂಬೆದಾರ್, ಪ್ರವೀಣ್ ಕುಲಾಲ್ ಕುಂಟಾಲ್ ಪಲ್ಕೆ, ಪುಷ್ಪರಾಜ್ ಜಕ್ರಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
















