ಮಂಗಳೂರು: ಹೊೖಗೆಬಜಾರ್ ಫ್ರೆಂಡ್ಸ್ ಕ್ರಿಕೆಟರ್ಸ್ (ರಿ.) ಇದರ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಏ.5 ರಂದು ಶನಿವಾರ ಎಚ್.ಎಫ್.ಸಿ ಹೊೖಗೆಬಜಾರ್ ಮೈದಾನದಲ್ಲಿ ನಡೆಯಲಿದೆ.
ಸಂಜೆ 5 ಗಂಟೆಗೆ ಸಾರ್ವಜನಿಕ ಶನಿಪೂಜೆ ನಡೆಯಲಿದ್ದು.7ಗಂಟೆಗೆ ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿರುವುದು,
ರಾತ್ರಿ 8 ಗಂಟೆಗೆ ಶಾಸಕ ಡಿ. ವೇದವ್ಯಾಸ್ ಕಾಮತ್ ಸಹಿತ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ
ಹಾಗೂ 30 ಗಜಗಳ ಅಂಡರ್ ಆರ್ಮ ಪಂದ್ಯಾಟದ ಅಂಕಪಟ್ಟಿಯ ಅಗ್ರ 3 ತಂಡಗಳಿಗೆ ಪ್ರಶಸ್ತಿ ವಿತರಣೆ ನಡೆಯಲಿದ್ದು ನಂತರ ರಾತ್ರಿ 9:30ಗಂಟೆಗೆ ಚಾ ಪಾರ್ಕ್ ಕಲಾವಿದರು ಕುಡ್ಲ ಇವರಿಂದ ಏರ್ಲ ಗ್ಯಾರಂಟಿಅತ್ತ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ













