Coastal Bulletin

ಬಂಟ್ವಾಳ :ತಾಲೂಕಿನ ತುಂಬೆ ಗ್ರಾಮದ ಕಾರಣಿಕ ಕ್ಷೇತ್ರ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಉತ್ಸವದ ಪ್ರಯುಕ್ತ ವಿಶೇಷ ಪೂಜೆ, ಅನ್ನಸಂತರ್ಪಣೆ, ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಮಾ 1ರಂದು ಸಂಜೆ ತರಿಕಿಟ ಕಲಾ ಕಮಟ (ರಿ) ಹಾಗೂ ಜಿಲ್ಲೆಯ ಹೆಸರಾಂತ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ವಿಜಿತ್ ಶೆಟ್ಟಿ ಆಕಾಶಭವನ ರಚಿಸಿರುವ ಶಿವ ಭಕ್ತ ಸಿರಿಯಾಳ ಎನ್ನುವ ತುಳು ಯಕ್ಷಗಾನ ಪ್ರದರ್ಶನಗೊಂಡು ಜನ ಮೆಚ್ಚುಗೆ ಗಳಿಸಿತು.

ಶಿವ ಪಾರ್ವತಿಯ ತಾಂಡವ ನೃತ್ಯ ಹಾಗೂ ಒಡ್ಡೋಲಗದ ಸೊಬಗು ಯಕ್ಷಗಾನವನ್ನು ಪ್ರಾರಂಭದಲ್ಲಿ ಮೇಲೆತ್ತಲು ಸಹಕಾರಿಯಾಯಿತು. ಸ್ಥಳೀಯ ಪುಟಾಣಿಗಳು ಋಷಿಮುನಿಗಳ ಪಾತ್ರ ನಿರ್ವಹಿಸಿ ಮದಾಂಧ ಭೃಕುಟಿಗೆ ಶಾಪ ನೀಡುವ ಸಂದರ್ಭವೂ ಇತರ ಮಕ್ಕಳಿಗೆ ಯಕ್ಷಗಾನದಾಸಕ್ತಿ‌ ಹೆಚ್ಚಿಸುವಂತಿತ್ತು. ನಂತರ ಬರುವ ಶಿವಯೋಗಿಯು ಕೋಪಗೊಳ್ಳುವಂತಹ ದೃಶ್ಯವು ಕಟೀಲು ಕ್ಷೇತ್ರ ಮಹಾತ್ಮೆಯ ಜಾಬಾಲಿ ಪಾತ್ರವನ್ನು ಹೋಲುವಂತಿತ್ತು. ಪ್ರಸಂಗದ ಕೊನೆಯಲ್ಲಿ ಶಿವ ಜಂಗಮನಾಗಿ ಭಕ್ತರನ್ನು ಕಾಡುವ ಪೀಡಿಸುವ ಪಾತ್ರವು ಸತ್ಯ ಹರಿಶ್ಚಂದ್ರ ದ ನಕ್ಷತ್ರಿಕನನ್ನು ಹೋಲುತ್ತಿತ್ತು. ಕಥಾನಾಯಕ ಸಿರಿಯಾಳ ಹಾಗೂ ರಾಣಿ ಹಾಗೂ ಆತನ ಮಗನ ತರುಣ ರಸಭರಿತ ಭಕ್ತಿ ರಸಭರಿತ ಅಭಿನಯ ಮಾತುಗಾರಿಕೆ ನೋಡುಗರನ್ನು ಭಾವನಾಲೋಕದಲ್ಲಿ ವಿಹರಿಸುವಂತೆ ಮಾಡುವಲ್ಲಿ ಸಫಲವಾಯಿತು.

ಮಗನನ್ನು ಕೈಯಾರೆ ಕಡಿಯುವ ದೃಶ್ಯವು ವೀಕ್ಷಕರ ಕಣ್ಣಂಚಿನಲ್ಲಿ ಕಂಬನಿ ಮಡುಗಟ್ಟು ವಂತೆ ಮಾಡಿದ್ದು ನಿಜವಾಗಿಯೂ ಕಲಾವಿದರ ಪಾತ್ರ ಪ್ರವೇಶದ ಕುಶಲತೆಯನ್ನು ತೋರಿದಂತಿತ್ತು. ಯಮ ಚಿತ್ರಗುಪ್ತ ಹಾವು ಮುಂಗುಸಿಗಳು ಪ್ರಸಂಗಕ್ಕೆ ತಹ ಪಾತ್ರಗಳಾಗಿ ಕಂಡುಬಂದರು. ಈ ಪಾತ್ರಗಳು ಸೌಮ್ಯ ಭಾವದಲ್ಲಿ ಮುಂದುವರೆಯುವ ಸಮಯದಲ್ಲಿ ಏರು ಭಾವವನ್ನು ಕೊಟ್ಟು ಭಾವನಾ ಏರಿಳಿತಗಳಿಗೆ ಸಾಕ್ಷಿಯಾಯಿತು. ಆ ಮೂಲಕ ಪ್ರೇಕ್ಷಕರನ್ನು ತನ್ನ ಜೊತೆಗೆ ಎಚ್ಚರವಾಗಿಡಲು, ಜೊತೆಗೆ ಯಕ್ಷಗಾನವು ಉತ್ತಮವಾಗಿ ಮೂಡಿಬರಲು ಸಹಕಾರಿಯಾಯಿತು.

ಒಂದು ಕಾಲದಲ್ಲಿ ಶಿವಭಕ್ತಿಯನ್ನು ಸಾರುವ ಅನನ್ಯ ಚಿತ್ರವೊಂದು ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ನಿರ್ಮಿಸಿ, ಎಲ್ಲಾ ಕಲಾವಿದರು

ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಇದು ನಮಗೆ ನಮ್ಮ ಹಿರಿಯರು ಹೇಳಿರುವ ಸಂಗತಿ. 

ಇದೀಗ ಇಂತಹದೊಂದು ಪ್ರಸಂಗ ಯಕ್ಷಗಾನ ರೂಪದಲ್ಲಿ ತುಳುಬಾಷೆಯಲ್ಲಿ ಮೂಡಿಬಂದಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ. ಇದು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಜೊತೆಗೆ ಸತ್ಯಧರ್ಮದ ಚಿತ್ರಣವನ್ನು ನೋಡುಗರ ಮನಸ್ಸಿಗೆ ತಟ್ಟುತ್ತದೆ ಎಂದು ಶಿವ ಭಕ್ತ ಸಿರಿಯಾಳ ಯಕ್ಷಗಾನ ವೀಕ್ಷಿಸಿದ ಕಲಾಭಿಮಾನಿಯೊಬ್ಬರು ಬಹಳ ಅಭಿಮಾನದ ಹೇಳಿರುವ ಈ ಮಾತು ಯಕ್ಷಗಾನದ ಯಶಸ್ವಿಗೆ ಸಾಕ್ಷಿಯಾಗಿತ್ತು.

ಹಿಮ್ಮೇಳದಲ್ಲಿ ಯುವ ಪ್ರತಿಭೆ ಉದಯಕುಮಾರ್ ಜ್ಯೋತಿಗುಡ್ಡೆ ಭಾಗವತರಾಗಿ,ರಂಜಿತ್ ಜ್ಯೋತಿಗುಡ್ಡೆ ಹಾಗೂ ಮುರಳೀಧರ ನೇರಂಕಿ  ಸಹಕರಿಸಿದರು, ಅಜಯ್ ಕುಮಾರ್ ಅಜಿಲ ಚಂಡೆ ವಾದಕರಾಗಿದ್ದರು, ಶ್ರೀ ದಯಾನಂದ ಪಿಲಿಕೂರ್ ನಾಟ್ಯ ಗುರುಗಳಾಗಿ ಸಹಕರಿಸಿದರು. ಭಾರತಿ ಕಲಾ ಆರ್ಟ್ಸ್ ನ ವೇಷಭೂಷಣದ ಮೆರುಗಿತ್ತು. ಅಂಬುರುಹದ ಕುಮಾರ್ ಮಾಲೆಮಾರ್ ಇವರ ಸಹಕಾರವಿತ್ತು.

ಪಾತ್ರದಾರಿಗಳಾಗಿ-ಶಿವ :ಆಶಾಲತಾ ಪೆರಿಯೋಡಿ, ಪಾರ್ವತಿ:ಹರ್ಷಿತಾ ಆರ್ ತುಂಬೆ, ಭೃಕುಟಿ : ಪ್ರಜ್ವಲ್ ಬಂಗೇರ ಇಜ್ಜಾ, ಋಷಿ ಸಂಕುಲ- : ಆಶೀಕಾ ದರಿಬಾಗಿಲು,ಋಷಿ ಸಂಕುಲ : ದಕ್ಷ ಬಾದಲ್ ಜ್ಯೋತಿಗುಡ್ಡೆ,  ಶ್ರೀಮತಿ ದಿವ್ಯಾ ಪುತ್ತೂರು ಸಿರಿಯಾಳ : ರಾಧಾಕೃಷ್ಣ ಪೂಜಾರಿ ಇಜ್ಜಾ, ಚಾಂಗಳ : ಸುಷ್ಮಿತಾ ಕೋಟ್ಯಾನ್ ಕಾವೂರು,ತಪಯೋಗಿ : ಕೇಶವ ಪೆರಿಯೋಡಿ,ತಿಲ್ಲಾಳ : ಜಾನ್ವಿ ಮಾಲೆಮಾರ್, ಯಮ : ಹರಿಣಿ ಕೆಂಜಾರು,ಚಿತ್ರಗುಪ್ತ : ಅರುಣ್ ಪೆರಿಯೋಡಿ,ಸರ್ಪ : ಜಿತೇಶ್ ಗುತ್ತ,ಬಿತ್ಲ್ಗುಮುಂಗುಸಿ  : ಖುಷಿ ಪೆರಿಯೋಡಿ, ಅಗೋರಿ : ಅರುಣ ಪೆರಿಯೋಡಿ ಸಹಕರಿಸಿದರು 

ಒಟ್ಟಿನಲ್ಲಿ ಸ್ವಾರ್ಥವಿಲ್ಲದ ಭಕ್ತಿಯ ಕುರಿತ ಕಥಾಹಂದರದ ಪ್ರದರ್ಶನ ಸುಮಾರು 12 ಗಂಟೆ ತನಕ ಪ್ರೇಕ್ಷಕರನ್ನು ತನ್ನ ಜೊತೆಗೆ ಇಟ್ಟುಕೊಳ್ಳಲು ಯಶಸ್ವಿಯಾಯಿತು. 

Leave a Comment