Coastal Bulletin

ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಎಂಬಲ್ಲಿ ರೂ 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡ ಶ್ರೀ ಗಾಯತ್ರಿ ದೇವಿ ದೇವಸ್ಥಾನಕ್ಕೆ ಭಕ್ತರೊಬ್ಬರು ಶ್ರೀ ರಾಘವೇಂದ್ರ ಸ್ವಾಮಿ ಉತ್ಸವ ಮೂರ್ತಿ ಸಮರ್ಪಿಸಿದರು.

ಕ್ಷೇತ್ರದ ಆಡಳಿತ ಧರ್ಮದಶರ್ಿ ಕೆ.ಎಸ್.ಪಂಡಿತ್ ಮಾತನಾಡಿ, ಫೆ.8ರಿಂದ 10ರತನಕ ನಡೆಯುವ ಬ್ರಹ್ಮಕಲಶೋತ್ಸವ ವೇಳೆ ಶ್ರೀ ಮಹಾಗಣಪತಿ ಮತ್ತು ಗುರು ರಾಘವೇಂದ್ರ ಸ್ವಾಮಿ ಬಿಂಬ ಪ್ರತಿಷ್ಠೆ ನಡೆಯಲಿದೆ ಎಂದರು.

ಇದೇ ವೇಳೆ ಶಿಲ್ಪಿ ಗುಣವಂತ ಭಟ್ ಕಾರ್ಕಳ ಇವರು ಪಂಚಲೋಹದ ರಾಘವೇಂದ್ರ ಸ್ವಾಮಿ ಉತ್ಸವ

ಮೂತರ್ಿಗೆ ಪೂಜೆ ಸಲ್ಲಿಸಿದ ಬಳಿಕ ಹಸ್ತಾಂತರಿಸಿದರು. ಸೇವಾಥರ್ಿ ಜಯಪ್ರಕಾಶ್ ತುಂಬೆ, ಜೀಣರ್ೋದ್ಧಾರ ಸಮಿತಿ ಪ್ರಧಾನ ಕಾರ್ಯದಶರ್ಿ ನಾಗೇಶ ಕಲ್ಲಡ್ಕ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದಶರ್ಿ ಮೋಹನ್ ಕೆ.ಶ್ರೀಯಾನ್ ರಾಯಿ, ಪ್ರಮುಖರಾದ ಅಭಿಷೇಕ್ ಪಿಲಿಂಗಾಲು, ಡೊಂಬಯ ಸಪಲ್ಯ, ಹರೀಶ ಪಿಲಿಂಗಾಲು ಮತ್ತಿತರರು ಇದ್ದರು.

Leave a Comment