ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣಮೂರ್ತಿ ನಾವೂರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಉಮೇಶ್ ಕುಲಾಲ್ ನಾವೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಧರ್ಮದಾಯದತ್ತಿಗಳ ಅಧಿನಿಯಮದಂತೆ ನೂತನ ಸದಸ್ಯರನ್ನು ಆಯ್ಕೆಗೊಳಿಸಿ ಸರಕಾರ ಆದೇಶ ಹೊರಡಿಸಿದ್ದು ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಭಟ್, ಡೊಂಬಯ್ ನಾಯ್ಕ ಪುಷ್ಪಾವತಿ ತಾರನಾಥ ಕುಲಾಲ್, ವಿನುತ ಪುಷ್ಪರಾಜ್, ಎನ್. ವಾದಿರಾಜ ಆಚಾರ್ಯ,
ರಾಜೇಶ್ ಗೌಡ, ವಿಜಯ ಕುಮಾರ್, ಬೇಬಿ ಸುವರ್ಣ ಹಾಗೂ ಉಮೆಶ್ ಕುಲಾಲ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿತ್ತು. ಇದೀಗ ಸದಸ್ಯರ ಸಭೆಯನ್ನು ನಡೆಸಿ ಸಮಿತಿಯ ಅಧ್ಯಕ್ಷರನ್ನಾಗಿ ಉಮೇಶ್ ಕುಲಾಲ್ ನಾವೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.















