ಸುರತ್ಕಲ್ :ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ (ರಿ ) ಚಕ್ರ ಸೌಧ ಕುಲಾಯಿ. ಇದರ ಕೃಷ್ಣಾಪುರದ ಶಾಖೆಯ ಸ್ಥಳಾಂತರ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ನ. 30ರಂದು ಜರುಗಿತು.
ಮಂಗಳೂರು ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. INTUC ರಾಷ್ಟ್ರೀಯ ಅಧ್ಯಕ್ಷ ಅಬೂಬಕ್ಕರ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಶ್ರೀ ಭಾಸ್ಕರ್ ಪೆರುವಾಯಿ ಠೇವಣಿ ಪತ್ರವನ್ನು ಬಿಡುಗಡೆಗೊಳಿಸಿದರು. ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪ್ರೇಮಾನಂದ ಕುಲಾಲ್ ಮತ್ತು ದಿನೇಶ್ ಕುಲಾಲ್ ಸಹೋದರರು ದೀಪ ಪ್ರಜ್ವಲನೆ ಮಾಡಿದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಮಳಲಿ ಇದರ ಅಧ್ಯಕ್ಷರಾದ ಸುಂದರ್ ಬಿ ಅದ್ಯಪಾಡಿ ಮತ್ತು ಬಂಟ್ವಾಳ ಸಮಾಜ ಸೇವಾ ಸಹಕಾರ ಬ್ಯಾಂಕ್ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಕುಲಾಲ್ ಶುಭ ಹಾರೈಸಿದರು. ಉದ್ಯಮಿಗಳಾದ ವಂಶಿ ಗ್ಲಾಸ್ ಮಾಲಿಕ ಶ್ರೀನಾಥ್ ವಿದ್ಯಾರ್ಥಿಗಳಿಗೆ ಹಿತನುಡಿ ನೀಡಿದರು. ದ. ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತ್ರ್ ಸಂಘದ ಪ್ರಧಾನ ಕಾರ್ಯದರ್ಶಿ ಹಾಗು ವಕೀಲರಾದ ಕುಶಾಲಪ್ಪ ಕೆ. ವಿದ್ಯಾರ್ಥಿ ವೇತನ ವಿತರಿಸಿದರು. ಕುಂಬೇಶ್ವರ ಸಹಕಾರಿ ಸಂಘ ಸುರತ್ಕಲ್ ಇದರ
ಅಧ್ಯಕ್ಷರಾದ ನಾಗೇಶ್ ಕುಲಾಲ್, ಹಾಗೂ ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷರಾದ ಬಾಬು ಚಂದ್ರ ಶುಭಾಶಯ ಕೋರಿದರು. ಸುಮಾರು 296 ಸದಸ್ಯರ ಮಕ್ಕಳಿಗೆ ನಾಲ್ಕು ಲಕ್ಷದ ತೊಂಬತ್ತು ಸಾವಿರ ರೂಪಾಯಿ ವಿದ್ಯಾರ್ಥಿವೇತನ ವಿತರಿಸಿ ಸಹಕಾರಿ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ರವರು ವಿದ್ಯಾರ್ಥಿವೇತನ ಪಡೆದ ಮಕ್ಕಳು ಸಾಧನೆಯನ್ನು ಮಾಡಿ ಸಮಾಜಕ್ಕೆ ಮತ್ತು ಹೆತ್ತವರಿಗೆ ಕೀರ್ತಿಯನ್ನು ತರಬೇಕು ಹಾಗೂ ಸಂಸ್ಥೆಯು ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಂಗ ಮಾಡುವ ಮಕ್ಕಳಿಗೆ ಕಡಿಮೆ ಬಡ್ಡಿ ದರದಲ್ಲಿ ವಿದ್ಯಾನಿಧಿ ಸಾಲವನ್ನು ನೀಡುವ ಯೋಜನೆ ಇದೆ ಎಂದು ತಿಳಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಸುರೇಶ್ ಸಾಲಿಯಾನ್ ನಿರ್ದೇಶಕರಾದ ಶೇಖರ್ ಕುತ್ತಾರ್, ಶ್ರೀಮತಿ ರೂಪ,ಶ್ರೀಮತಿ ಪಾರ್ವತಿ,
ಶ್ರೀ ಪದ್ಮನಾಭಬಂಗೇರ, ಶ್ರೀ ಗಣೇಶ್ ಎಸ್, ಶ್ರೀ ಪ್ರದೀಪ್ ಅತ್ತಾವರ,ಶ್ರೀ ಸಂದೀಪ್ ಪ್ರಸಾದ್, ಶ್ರೀ ಲಕ್ಷ್ಮಣ್ ಮೂಲ್ಯ ಸರಕಾರದ ನಾಮನಿರ್ದೇಶಿತ ಸದಸ್ಯರಾದ ಎ. ಸದಾಶಿವ ಕುಲಾಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಯ್ ಕುಮಾರ್ ಶಾಖಾಧಿಕಾರಿ ಶ್ರೀಮತಿ ಪವಿತ್ರ ಉಪಸ್ಥಿತರಿದ್ದರು. ಪ್ರವೀಣ್ ಬಸ್ತಿ ಯವರು ಕಾರ್ಯಕ್ರಮವನ್ನು ನಿರೂಪಿಸಿದರು.












