ದ ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ . ಸಮಾಜದ ಏಳಿಗೆಗೆ ಶ್ರಮಿಸಿದ ಹಿರಿಯರಿಗೆ ಪ್ರಶಸ್ತಿ ಅರ್ಪಣೆ: ಮಯೂರ್ ಉಳ್ಳಾಲ್

Coastal Bulletin
ದ ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗರಿ . ಸಮಾಜದ ಏಳಿಗೆಗೆ ಶ್ರಮಿಸಿದ ಹಿರಿಯರಿಗೆ ಪ್ರಶಸ್ತಿ ಅರ್ಪಣೆ: ಮಯೂರ್ ಉಳ್ಳಾಲ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘವು ಸಮಾಜಿಕ ಸೇವೆಯ ಸಾಧನೆಗಾಗಿ 2025ನೇ ಸಾಲಿನ ಪ್ರತಿಷ್ಠಿತ ದ ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನವಾಗಿದೆ.

ಕೇಂದ್ರ ಮೈದಾನದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಪ್ರಶಸ್ತಿ ಗೌರವ ಸ್ವೀಕರಿಸಿ ಬಳಿಕ ಮಾತನಾಡಿ ಮಾತೃ ಸಂಘವನ್ನು ಹಲವಾರು ವರುಷ ಸಂಘಟನಾತ್ಮಕವಾಗಿ ತಳಮಟ್ಟದಲ್ಲಿ ಕಟ್ಟಿ ಸಮಾಜದ ಏಳಿಗೆಗೆ ಶ್ರಮಿಸಿದ ಸಮುದಾಯದ ಎಲ್ಲಾ

ಹಿರಿಯ ಜೀವಗಳಿಗೆ ಈ ಪ್ರಶಸ್ತಿಯನ್ನು ಸಮರ್ಪಸುತ್ತಿದ್ದೇನೆ, ಅದೇ ರೀತಿ ಕುಲಾಲ ಸಮುದಾಯದಲ್ಲಿ ಹಿಂದುಳಿದ ಬಡ ಕುಟುಂಬದ ಸೇವೆಗಯ್ಯಲು ಹಾಗೂ ಸಂಘದ ಮುಂದಿನ ಕಾರ್ಯ ಯೋಜನೆಯನ್ನು ಮುಂದುವರಿಸಲು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇನ್ನಷ್ಟು ಶಕ್ತಿ ಹಾಗೂ ಸ್ಪೂರ್ತಿ ತುಂಬಿದೆ ಎಂದು ಹೇಳಿದರು.

Leave a Comment