ಬಂಟ್ವಾಳ :ಮೃತ ಕೃಷ್ಣ ಕುಲಾಲ್ ಕುಟುಂಬಕ್ಕೆ  ಪರಿಹಾರ ಹಸ್ತಾಂತರ.

Coastal Bulletin
ಬಂಟ್ವಾಳ :ಮೃತ ಕೃಷ್ಣ ಕುಲಾಲ್ ಕುಟುಂಬಕ್ಕೆ  ಪರಿಹಾರ ಹಸ್ತಾಂತರ.

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿ.ಮೂಡ ಗ್ರಾಮದ ಮೊಡಂಕಾಪು ರಾಜೀವ ಪಲ್ಕೆಯ ನಿವಾಸಿ ಕೃಷ್ಣ ಕುಲಾಲ್ ಅವರು ಶಂಭೂರಿನ ಎ.ಎಂ.ಆರ್. ಸಂಸ್ಥೆಯಿಂದ ಪಲ್ಲಮಜಲು ಗ್ರಿಡ್‌ಗೆ ವಿದ್ಯುತ್ ಸರಬರಾಜು ಮಾಡುವ ಹೆಚ್.ಟಿ. ವಿದ್ಯುತ್ ತಂತಿ ತಗುಲಿ ಸಂಭವಿಸಿದ ದುರ್ಘಟನೆಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬಕ್ಕೆ ಎ.ಎಂ.ಆರ್. ಸಂಸ್ಥೆಯ ವತಿಯಿಂದ ₹5 ಲಕ್ಷ ಪರಿಹಾರ ಧನವನ್ನು ಹಸ್ತಾಂತರಿಸಲಾಯಿತು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪರಿಹಾರ ಧನವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗೋವಿಂದ ಪ್ರಭು, ಸುಲೋಚನಾ ಜಿ.ಕೆ.

ಭಟ್, ಹರಿಕೃಷ್ಣ ಬಂಟ್ವಾಳ್, ಮಚ್ಚೇಂದ್ರ ಸಾಲ್ಯಾನ್, ಕೇಶವ ದೈಪಲ, ಸುದರ್ಶನ್ ಬಜ, ಚೆನ್ನಪ್ಪ ಕೋಟ್ಯಾನ್, ದೇವಪ್ಪ ಪೂಜಾರಿ, ಮಾಧವ ಮಾವೆ, ದಿನೇಶ್ ಅಮ್ಟೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Comment