ಕೊಡ್ಮಾಣ್: ಶ್ರೀ ಶಾರದಾ ಪೂಜಾ ಸಂಭ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ. ಭಾರತ ಮಾತೃ ಪ್ರದಾನ ದೇಶ: ಗಣರಾಜ ಭಟ್ ಕೆದಿಲ.

Coastal Bulletin
ಕೊಡ್ಮಾಣ್: ಶ್ರೀ ಶಾರದಾ ಪೂಜಾ ಸಂಭ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ. ಭಾರತ ಮಾತೃ ಪ್ರದಾನ ದೇಶ: ಗಣರಾಜ ಭಟ್ ಕೆದಿಲ.

ಬಂಟ್ವಾಳ : ಭಾರತ ಮಾತೃ ಪ್ರದಾನ ದೇಶ, ಆರಾಧನೆ ಕೂಡ ಮಾತೆಯರಿಗೆ ನಡೆಯುತ್ತಿದೆ. ಮಾತೃ ಶಕ್ತಿ ಜಗತ್ತಿನ ಶಕ್ತಿ, ಜಗತ್ತಿನಲ್ಲಿ ಯಾರು ಪ್ರಶ್ನೆ ಮಾಡದ ಒಂದು ಜೀವವಿದ್ದರೆ ಆದು ತಾಯಿ ಮಾತ್ರ. ಮಾತೆ ಕೂಡುವ ಸಂಸ್ಕಾರ ಶಿಕ್ಷಣದಿಂದ ಭಾರತ ಗಟ್ಟಿಯಾಗಿದೆ. ಆದರೆ ಇಂದು ನಮ್ಮ ಸಂಸ್ಕಾರ ಸಂಸ್ಕೃತಿ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಹಾಳಾಗುತ್ತಿದೆ, ನಮ್ಮ ಸಂಸ್ಕೃತಿಯನ್ನು ಕೊಲ್ಲುವ ವಿಕೃತಿಗಳು ನಡೆಯುತ್ತಿದೆ, ಆದ್ದರಿಂದ ಇಂತಹ ಧಾರ್ಮಿಕ ಆಚರಣೆಗಳ ಮೂಲಕ ನಮ್ಮಲ್ಲಿ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ತಾಯಿ ಭಾರತ ಮಾತೆಯ ಅಭ್ಯೋದಯಕ್ಕೆ ಪಣ ತೋಡೋಣ ಎಂದು ಸಾಮಾಜಿಕ ಕಾರ್ಯಕರ್ತ ಭಾ.ಗಣರಾಜ ಭಟ್ ಕೆದಿಲ ಹೇಳಿದರು.

ಅವರು ಕೊಡ್ಮಾಣ್ ಶ್ರೀ ಶಾರದಾ ಪೂಜಾ ಸೇವಾ ವೇದಿಕೆಯ ಅಶ್ರಯದಲ್ಲಿ ನಡೆಯುವ ಶ್ರೀ ಶಾರದಾ ಪೂಜಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೋಟ್ಯಾಡಿ ಮಾತನಾಡಿ, ಪ್ರಪಂಚಕ್ಕೆ ಮಾರ್ಗದರ್ಶನ ಮಾಡಿದ ದೇಶ ಭಾರತ, ನವರಾತ್ರಿಯ ಶುಭ ಸಂದರ್ಭದಲ್ಲಿ ನಮ್ಮೆಲ್ಲರಲ್ಲಿ ಶಕ್ತಿ,ಸಂಪತ್ತು, ವಿದ್ಯೆ ಮೈಗೂಡಲಿ, ಶಕ್ತಿ ಸ್ವರೂಪಿಯಾದ ನಮ್ಮ ಮಾತೆಯರು ಎಲ್ಲರಿಗೂ ಉತ್ತಮ ಸಂಸ್ಕಾರವನ್ನು ಕೊಟ್ಟು ಆದರ್ಶ ಸಮಾಜದ ಕನಸಿಗೆ ಶಕ್ತಿ ತುಂಬಲಿ ಎಂದು ಹೇಳಿದರು.

ದ ಕ ಜಿಲ್ಲಾ ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ರವೀಂದ್ರ ಕಂಬಳಿ ಸುಜೀರುಗುತ್ತು ಇವರನ್ನು ಗೌರವಿಸಿ ಸನ್ಮಾನಿಸಲಾಯಿತು ಹಾಗೂ ಕೊಡ್ಮಾಣ್ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತಿರ್ಣಗೊಂಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ವೇದಿಕೆಯಲ್ಲಿ

ಕೆನರಾ ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಸೀಮಾ ಪ್ರಭು ಎಸ್, ಕೊಡ್ಮಾಣ್ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಭಾಸ್ಕರ ರಾವ್ ಟಿ, ಮೇರಮಜಲು ಗ್ರಾ, ಪo ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ, ಮೇರಮಜಲು ಗ್ರಾ, ಪo ಸದಸ್ಯ ಪದ್ಮನಾಭ ಶೆಟ್ಟಿ, ಉತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪಾಪೆದಡಿ ಪ್ರ, ಕಾರ್ಯದರ್ಶಿ ಚೇತನ್ ಕುಮಾರ್ ಕಾಂಜಿಲಕೋಡಿ, ಕೋಶಾಧಿಕಾರಿ ಸುರೇಂದ್ರ ಆಳ್ವ ಪೊನ್ನೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.

ಸಂಯೋಜಕ ಗೋಪಾಲ್ ಕುಲಾಲ್ ಗೋವಿಂತೋಟ ಸ್ವಾಗತಿಸಿ,ಸಚಿನ್ ಕಲ್ಲಜಾಲ್ ಧನ್ಯವಾದವಿತ್ತು ಆರ್ ಜೆ ಮನೋಜ್ ವಾಮಂಜೂರ್ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಚಂಡಿಕಾಯಾಗ ನಡೆದು ಪೂರ್ಣಾಹುತಿಯ ಬಳಿಕ ಅನ್ನಸಂತರ್ಪಣೆ ನಡೆಯಿತು, ಸಂಜೆ ಬೆಂಕಿನಾಥೆಶ್ವರ ಮೇಳದವರಿಂದ ಮಹಿಮೆದ ಮಂತ್ರ ದೇವತೆ ಯಕ್ಷಗಾನ ಬಯಲಾಟ ಜರುಗಿತು.

Leave a Comment