ಬಂಟ್ವಾಳ :ರಾಧಾ ಸುರಭಿ ಗೋ ಮಂದಿರ ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಬ್ರಹ್ಮಗಿರಿ ಗೋವಿನ ತೋಟ ಪುದು ಇಲ್ಲಿ ನಡೆಯುವ ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ, ಮಹಾಯಜ್ಞ ಹಾಗೂ ಗೋ ನವರಾತ್ರಿ ಉತ್ಸವದ ಪೂರ್ವಭಾವಿಯಾಗಿ ಯುವ ಸಂಘಟನಾ ಸಮಾವೇಶವು ಅ.1ರಂದು ಆದಿತ್ಯವಾರ ರಾಧಾ ಸುರಭಿ ಗೋ ಮಂದಿರದ ಗೋವಿನ ತೋಟದಲ್ಲಿ ನಡೆಯಿತು.
ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಸಮಿತಿಯ ಅಧ್ಯಕ್ಷರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ದೇಶವು ಇಂದು ಅಮೃತ ಕಾಲದಲ್ಲಿ ಇದೆ ನಮಗೆ ಹಿಂದೂ ಧರ್ಮದ ಸಂಸ್ಕೃತಿ ಸಂಸ್ಕಾರ, ಆಚಾರ ವಿಚಾರಗಳಲ್ಲಿ ನಂಬಿಕೆ ಮುಖ್ಯ ಧರ್ಮದ ಆಧಾರದಲ್ಲಿ ಮಾತ್ರ ದೇಶವು ವಿಶ್ವಗುರುವಾಗಲು ಸಾಧ್ಯ ಭಾರತದ ಜೀವನ ಪದ್ಧತಿ ಬಗ್ಗೆ ಬೇರೆ ಬೇರೆ ದೇಶಗಳು ಇಂದು ಬೆರಗುಗಣ್ಣಿನಿಂದ ನೋಡುತಿದೆ ಆದ್ದರಿಂದ ಹಿಂದೂ ಜೀವನ ಪದ್ಧತಿಯೇ ಜಗತ್ತಿನ ಮನುಕುಲದ ಶಾಂತಿಗೆ ಮೂಲ ಆಧಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ ರಾಧಾ ಸುರಭಿ ಗೋ ಮಂದಿರದ ಭಕ್ತಿ ಭೂಷಣ್ ದಾಸ್ ಪ್ರಭು, ಕಲಿಯುಗದಲ್ಲಿ ಹರಿನಾಮದ ಸ್ಮರಣೆಯಿಂದ ಭಗವಂತನ ಅನುಗ್ರಹವಾಗುತ್ತದೆ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಹರಿ ನಾಮ ಜಪ ಮಾಡಿದರೆ ಧರ್ಮಾಧಾರಿತ ಜೀವನ ಮಾಡಲು ಬದ್ಧತೆ ಬರುತ್ತದೆ. ಗೋವು ಆಧಾರಿತ ಕೃಷಿ ಮತ್ತು ಗುರುಕುಲ ಶಿಕ್ಷಣದಿಂದ ಧರ್ಮದ ಉನ್ನತಿ ಸಾಧ್ಯ.ಭಾರತವೆಂಬ ಪರಮ ಪವಿತ್ರ ಭೂಮಿಯಲ್ಲಿ ಯುವ ಜನಾಂಗವು ರಾಷ್ಟ್ರ ರಕ್ಷಣೆ, ಧರ್ಮ ರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು
ಜನ್ಮವನ್ನು ಸಾರ್ಥಕ ಮಾಡಿ ಪುಣ್ಯ ಕಟ್ಟಿ ಕೊಳ್ಳೋಣ ಎಂದು ಹೇಳಿದರು.
ಅಷ್ಟೋತ್ತರ ಶತ ಶ್ರೀಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಮಾತನಾಡಿ,ಭಾರತ ದೇಶವು ಪ್ರಸ್ತುತ ಅಧಿಕ ಯುವ ಸಂಪತ್ತು ಹೊಂದಿದೆ.ಭಾರತದ ಭವಿಷ್ಯವು ತರುಣ ಸಂಘಟನೆಯ ಸಾಮರ್ಥ್ಯದ ಮೇಲೆ ನಿಂತಿದೆ. ಯುವ ಪಡೆಯು ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ರಾಷ್ಟ್ರ ಧರ್ಮದ ರಕ್ಷಣೆ ಪಣ ತೊಡಬೇಕಾಗಿದೆ ಎಂದರು.
ಸಮಿತಿಯ ಕಾರ್ಯಧ್ಯಕ್ಷರಾದ ಟಿ ತಾರಾನಾಥ ಕೊಟ್ಟಾರಿ ಅಷ್ಟೋತ್ತರ ಶತ ಶ್ರಮದ್ಭಾಗವತ ಕಥಾ ಪಾರಾಯಣ ಸಪ್ತಾಹದ ಉದ್ದೇಶದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸಂಘಟನಾ ಕಾರ್ಯದರ್ಶಿ ರತ್ನಾಕರ ಶೆಟ್ಟಿ ಕಲ್ಲಡ್ಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಸಹ ಕಾರ್ಯವಾಹರಾದ ಹರಿಕೃಷ್ಣ ಮಂಗಳೂರು, ಉಪಸ್ಥಿತರಿದ್ದರು.
ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ, ಗಣೇಶ್ ಸುವರ್ಣ ತುಂಬೆ,ಅನಿಲ್ ಪಂಡಿತ್,ವಿನೋದ್ ಕೊಡಮಣ್ಣು, ಮನೋಜ್ ಆಚಾರ್ಯ,ಮನೋಹರ್ ಕಂಜತ್ತೂರ್, ವಿಜಯ ಕಜೆಕಂಡ, ಜಗದೀಶ್ ಬಂಗೇರ ನೆತ್ತರಕೆರೆ, ಯೋಗೀಶ್ ಕಡೆಗೋಳಿ, ಸಂತೋಷ್ ನೆತ್ತರಕೆರೆ ವಿನಯ್ಮ ಕುಮಾರ್ ಮತ್ತಿತರರು ಇದ್ದರು.
ಪ್ರ. ಕಾರ್ಯದರ್ಶಿ ದಾಮೋದರ ನೆತ್ತರಕೆರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.















