ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವ ಬಗ್ಗೆ ಸಮಾಲೋಚನಾ ಸಭೆಯು ಜು 30ರಂದು ಪೂರ್ವಾಹ್ನ 10.00 ಗಂಟೆಗೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೆಂಜನಪದವು ಪಶು ಸಂಗೋಪಣಾ ಇಲಾಖೆ ಅಧಿಕಾರಿ ಕಾರ್ತಿಕ್ ಮಾತನಾಡಿ,ಬೀದಿ ನಾಯಿ ಹಾವಳಿಯ ಮುನ್ನೆಚ್ಚರಿಕೆ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಿ ಕಾನೂನು ರೀತಿಯಲ್ಲಿ ಬೀದಿ ನಾಯಿ ಹಾವಳಿಯನ್ನು ತಡೆ ಗಟ್ಟಿ ಗ್ರಾ ಪಂ ಸಹಕಾರದಿಂದ ಹಿಡಿದು ಶಸ್ತ್ರ ಚಿಕಿತ್ಸೆ ಮಾಡಿ ಸಂತಾನ ಹರಣ ಮಾಡುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ತುಂಬೆ ಗ್ರಾ ಪಂ ಅಧ್ಯಕ್ಷೆ ಜಯಂತಿ ಕೇಶವ್, ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಶಿವಾಲಾಲ್ ಚೌವಾಣ್, ತುಂಬೆ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ, ಮಹಮ್ಮದ್ ವಲವೂರ್, ಹೇಮಲತಾ ಜಿ ಪೂಜಾರಿ, ಸದಸ್ಯರಾದ ಇಬ್ರಾಹಿಂ ವಲವೂರ್ , ಅಬ್ದುಲ್ ಅಜಿಜ್, ಮಹಮ್ಮದ್ ಝವ್ಲ್, ಕಿಶೋರ್ ರಾಮಲ್ ಕಟ್ಟೆ, ಅರುಣ್ ಗಾಣದ ಲಚ್ಚಿಲ್, ಆತಿಕ ಬಾನು, ಜಯಂತಿ ನಾಗೇಶ್, ಜಯಂತಿ ಶ್ರೀಧರ್, ಲೆಕ್ಕ ಸಹಾಯಕಿ ಚಂದ್ರಕಲಾ ಪ್ರಮುಖರಾದ ಅಂಗನವಾಡಿ ಕಾರ್ಯಕರ್ತೆರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಎಮ್.ಬಿ.ಕೆ ಮತ್ತು ತುಂಬೆ ಗ್ರಾಮಸ್ಥರು ಭಾಗವಹಿಸಿದ್ದರು.















