ಬಂಟ್ವಾಳ ತಾಲೂಕಿಗೆ ನೂತನವಾಗಿ ನೇಮಕವಾದ ತಹಸೀಲ್ದಾರ್ ಡಾ. ಸ್ಮಿತಾ ರಾಮುರವರನ್ನು ಬಿ ಸಿ ರೋಡಿನ ತಾಲೂಕು ಕಛೇರಿಯಲ್ಲಿ ಕುಲಾಲ ಯುವ ವೇದಿಕೆ ಬಂಟ್ವಾಳ ಪರವಾಗಿ ಆತ್ಮೀಯವಾಗಿ ಸ್ವಾಗತಿಸಿ, ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಔಪಚಾರಿಕ ಮಾತುಕತೆಯಲ್ಲಿ ಬಂಟ್ವಾಳದ ವೃತ್ತವೊಂದಕ್ಕೆ ಸ್ವಾತಂತ್ರ್ಯ ಹೋರಾಟಗಾರ ಡಾ ಬಾಳಪ್ಪರ ಹೆಸರನ್ನು ಇಡುವ ಬಗ್ಗೆ ಹಾಗೂ ರಕ್ತೇಶ್ವರಿ ದೇವಸ್ಥಾನದಿಂದ- ಕೈಕುಂಜ ಬಡಾವಣೆವರೆಗೆ ಹಾದುಹೋಗುವ ರಸ್ತೆಗೆ ತ್ರಿಪದಿ ಬ್ರಹ್ಮ ಸರ್ವಜ್ಞನ ಹೆಸರು ನಾಮಕರಣ ಮಾಡುವ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು.
ಇದಕ್ಕೆ ಸ್ಪಂದಿಸಿದ ತಹಸೀಲ್ದಾರರು ಕಾನೂನಾತ್ಮಕವಾಗಿ ತಮ್ಮಿಂದಾಗುವ ಕಾರ್ಯವನ್ನು ಶೀಘ್ರ ಮಾಡಿಕೊಡುವುದಾಗಿ ಭರವಸೆ
ಕೊಟ್ಟರು.
ಈ ಸಂದರ್ಭದಲ್ಲಿ ಕುಲಾಲ ಯುವ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ತಾಲೂಕು ಅಧ್ಯಕ್ಷರಾದ ಸಂತೋಷ್ ಮರ್ಥಾಜೆ,ಗೌರವ ಸಲಹೆಗಾರಾರದ ವಿಠಲ.ಬಂಜನ್,ಸತೀಶ್ ಜಕ್ರಿಬೆಟ್ಟು,ಕಾರ್ಯದರ್ಶಿ ನಿತೀಶ್ ಪಲ್ಲಿಕಂಡ ಮತ್ತಿತರರು ಇದ್ದರು.














