Coastal Bulletin

ನವದೆಹಲಿ : ಕೇಂದ್ರ ಸರ್ಕಾರ 2024ರ ಮಾರ್ಚ್ ವೇಳೆಗೆ ದೇಶಾದ್ಯಂತ 10 ಸಾವಿರ ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಕೇಂದ್ರ ಸ್ಥಾಪನೆ ಗುರಿ ಹೊಂದಿದೆ.

2008ರಲ್ಲಿ ಮೊದಲ ಬಾರಿಗೆ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಇದೀಗ  ದೇಶದ 739 ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಯೋಜನೆ ಜಾರಿಗೆ ಬಂದಿದೆ.

ಜನರು ಪಿಎಂಬಿಜೆಪಿಯಲ್ಲಿ ಕಡಿಮೆ ದರದಲ್ಲಿ ಸಿಗುವ ಔಷಧಿಗಳನ್ನು ಖರೀದಿ ಮಾಡುತ್ತಿದ್ದಾರೆ. ಸದ್ಯ ಈ ಕೇಂದ್ರಗಳಲ್ಲಿ

1600 ಔಷಧಿಗಳು, 250 ಶಸ್ತ್ರ ಚಿಕಿತ್ಸಾ ಉಪಕರಣಗಳು ಲಭ್ಯವಿದೆ. ಅಲ್ಲದೇ  ಹೊಸ ಔಷಧಗಳು ಮತ್ತು ಪೌಷ್ಟಿಕಾಂಶ ಉತ್ಪನ್ನಗಳಾದ ಪ್ರೋಟೀನ್ ಪೌಡರ್, ಮಾಲ್ಟ್ ಆಧಾರಿತ ಪೂರಕ ಆಹಾರ ಉತ್ಪನ್ನಗಳು, ಪ್ರೊಟೀನ್, ರೋಗನಿರೋಧಕ ಉತ್ಪನ್ನಗಳು, ಸ್ಯಾನಿಟೈಸರ್, ಮಾಸ್ಕ್ ಇತ್ಯಾದಿ ಉತ್ಪನ್ನಗಳನ್ನೂ ಸಹ ಪರಿಚಯಿಸಲಾಗಿದೆ.

Leave a Comment