ಕೆಕೆ ಎಂದೇ ಖ್ಯಾತರಾಗಿರುವ ಬಾಲಿವುಡ್‌ನ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರು 53 ನೇ ವಯಸ್ಸಿನಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ.
23 ಆಗಸ್ಟ್ 1968 ರಲ್ಲಿ ದೆಹಲಿಯಲ್ಲಿ ಜನಿಸಿದ ಕೃಷ್ಣಕುಮಾರ್ ಕುನ್ನತ್ ಬಾಲಿವುಡ್ ಹಾಗೂ ಅಭಿಮಾನಿಗಳಲ್ಲಿ ಕೆಕೆ ಎಂದೇ ಪ್ರಖ್ಯಾತಿಗಳಿಸಿದ್ದ ಇವರು ಹಮ್ ದಿಲ್ ದೇ ಚುಕೆ ಸನಮ್ (1999), ತಮಿಳಿನ "ಅಪಾಡಿ ಪೋಡು", ದೇವದಾಸ್ ಚಿತ್ರದ (2002)"ಡೋಲಾ ರೇ ಡೋಲಾ", "ಕ್ಯಾ ಮುಝೆ ಪ್ಯಾರ್ ಹೈ" ವೋ ಲಮ್ಹೆ (2006), "ಆಂಖೋನ್ ಮೇ ತೇರಿ ಹೀಗೆ ಹತ್ತು ಹಲವಾರು ಪ್ರಸಿದ್ದ ಹಾಡುಗಳಿಗೆ
ಧ್ವನಿಯಾಗಿದ್ದಾರೆ.
ಭಾರತೀಯ ಚಲನಚಿತ್ರೋದ್ಯಮದ ಬಹುಮುಖ ಗಾಯಕರಲ್ಲಿ ಒಬ್ಬರಾದ ಕೆಕೆ ಅವರು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಬೆಂಗಾಲಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದ್ದಾರೆ.
ಅವರು ಹಲವಾರು ಪ್ರಶಸ್ತಿಗಳ ಜೊತೆ, ಫಿಲ್ಮ್ಫೇರ್ ಸೌತ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.
ಕೆಕೆಯವರು ಪತ್ನಿ ಜ್ಯೋತಿ ,ಮಗ ನಕುಲ್ ಕೃಷ್ಣ ಕುನ್ನತ್ ಹಾಗೂ ಮಗಳು ತಮಾರಾ ಕುನ್ನತ್ ಅನ್ನು ಅಗಲಿದ್ದಾರೆ.













