Coastal Bulletin

ಬಂಟ್ವಾಳ: ತಂಬಾಕು ಸೇವನೆಯಿಂದ ದುಷ್ಪರಿಣಾಮ ಉಂಟಾಗುವುದರ ಜೊತೆಗೆ ಕ್ಯಾನ್ಸರ್ ಮತ್ತಿತರ ಮಾರಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಇದಕ್ಕಾಗಿ ದುಷ್ಚಟಮುಕ್ತ ಸಮಾಜ ನಿರ್ಮಾಣಗೊಂಡರೆ ಸಮೃದ್ಧ ಸಮಾಜವೂ ನಿರ್ಮಾಣವಾಗುತ್ತದೆ ಎಂದು ಜಿಲ್ಲಾ ಆರೋಗ್ಯ ನಿವೃತ್ತ ಮೇಲ್ವಿಚಾರಕ ಜಯರಾಮ ಪೂಜಾರಿ ಹೇಳಿದ್ದಾರೆ.

ಇಲ್ಲಿನ ಸಜಿಪಮುನ್ನೂರು ಶಾರದಾಂಬ ಜ್ಞಾನವಿಕಾಸ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕರ್ನಾಟಕ ಜನ ಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಇವರ ವತಿಯಿಂದ ಮಂಗಳವಾರ ನಡೆದ 'ತಂಬಾಕು ವಿರೋಧಿ ದಿನಾಚರಣೆ'

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಜಯಾನಂದ ಪಿ.ಸಮನ್ವಯಧಿಕಾರಿ ಸ್ವಪ್ನ, ಸೇವಾಪ್ರತಿನಿಧಿ ಬೇಬಿ,ವಲಯ ಮೇಲ್ವಿಚಾರಕಿ ಅಮಿತಾ ಮತ್ತಿತರರು ಇದ್ದರು. 

Leave a Comment