Coastal Bulletin

ಬಂಟ್ವಾಳ :ತಾಲೂಕಿನ ಬಾಳ್ತಿಲ ಗ್ರಾಮದ ಬರೆಪ್ಪಾಡಿ ಶ್ರೀ ಶೈಲ ಅರ್ಧನಾರೀಶ್ವರ ಸಾನಿಧ್ಯ ಅಸ್ತಿತ್ವ ಇರುವ ಸ್ಥಳದಲ್ಲಿ ಜೀರ್ಣೋದ್ದಾರ ಗೊಂಡಿರುವ ಮೂಲ ವಾಸುಕೀ ನಾಗದೇವರ ನೂತನ ನಾಗಾಲಯದಲ್ಲಿ ಶ್ರೀ ವಾಸುಕೀ ನಾಗದೇವರ ಪ್ರತಿಷ್ಠೆ, ಆಶ್ಲೇಷ ಬಲಿಪೂಜೆ ಮತ್ತು ಮಹಾಪೂಜೆಯು ಜೂನ್ 19 ಆದಿತ್ಯವಾರ ನಡೆಯಲಿದೆ.

ಜೂನ್ 18ರಂದು ಶನಿವಾರ ಸಂಜೆ 6ರಿಂದ ಸ್ಥಳ ಸುದ್ದಿ, ದೀಪ ಪ್ರಜ್ವಲನ,ಅಘೋರಾಸ್ತ್ರ ಹೋಮ,ಸುದರ್ಶನ ಹೋಮ, ವಸ್ತು ಪೂಜಾ ಹೋಮ, ನಾಗಶಿಲಾ ಬಿಂಬ ಶುದ್ದಿಕ್ರಿಯೆ ಮುಂತಾದ ವೈದಿಕ ಕಾರ್ಯಕ್ರಮಗಳು ಜರುಗಿ,ಅನ್ನಪ್ರಸಾದ ನಡೆಯಲಿದೆ.

19ರಂದು ಆದಿತ್ಯವಾರ ಬೆಳಿಗ್ಗೆ 5ರಿಂದ ಅಷ್ಟದ್ರವ್ಯ, ಗಣಪತಿ ಹೋಮ,ಕಳಶ ಪೂಜೆ,ಪ್ರಧಾನ ಹೋಮ ನಡೆದು,8 45 ರಿಂದ ಕರ್ಕಾಟಕ

ಲಗ್ನದಲ್ಲಿ ಶ್ರೀ ವಾಸುಕೀ ನಾಗದೇವರ ಪ್ರತಿಷ್ಠೆ, ಆಶ್ಲೇಷ ಬಲಿ ಪೂಜೆ.ಮಹಾಪೂಜೆ ನಡೆದು,ಪಲ್ಲ ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.

ಪ್ರತಿಷ್ಠಾ ದಿನದಂದು ಭಜನಾ ತಂಡಗಳಿಂದ ಹರಿನಾಮ ಸಂಕೀರ್ತನೆ ನಡೆಯಲಿದೆ ಹಾಗೂ ಭಕ್ತಾದಿಗಳಿಂದ ಅನ್ನಸಂತರ್ಪಣೆ ಪ್ರಯುಕ್ತ ಹಸಿರುವಾಣಿಗಳನ್ನು ಭಕ್ತಿಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಶ್ರೀಮತಿ ಶೈಲಜಾ ಮತ್ತು ಡಾ ರಾಜೇಶ್ ಪೂಜಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Comment