Coastal Bulletin

ಪೊಳಲಿ : ತಾಲೂಕಿನ ಬಡಕಬೈಲ್ ನ ಸಂತ ಡೊಮಿನಿಕ್ ಶಾಲೆಯಲ್ಲಿ ಮೇ 30 ಸೋಮವಾರ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸ ವನ್ನು ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಸಂಭ್ರಮೋಲ್ಲಾಸದಿಂದ ಆಗಮಿಸಿದ ಎಲ್ಲಾ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಶಾಲಾ ಸಂಚಾಲಕರಾದ ಧರ್ಮಗುರು ರೆಜಿನಾಲ್ಡ್ ಡಿಮೆಲ್ಲೋ, ಮುಖ್ಯೋಪಾಧ್ಯಾಯರಾದ ಫ್ರಾನ್ಸಿಸ್ ಅರುಣ್ ಡಿಸೋಜ ಹಾಗೂ

ಆಡಳಿತಾಧಿಕಾರಿ ಸುನಿಲ್ ಕ್ರಿಸ್ಟೋಫರ್ ಡಿಸೋಜ ಪ್ರೀತಿಪೂರ್ವಕ ವಾಗಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಶಿಕ್ಷಕಕರು,ಶಿಕ್ಷಕೇತರ ಸಿಬ್ಬಂದಿಗಳು ಮಕ್ಕಳನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಗೀತೆಯ ಮೂಲಕ ಸ್ವಾಗತಿಸಿದರು.

Leave a Comment