ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಕಡೆಗೋಳಿ ರಿಕ್ಷಾ ಚಾಲಕರ-ಮಾಲಕರ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ 2024-25ರ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ನೂತನ ಅಧ್ಯಕ್ಷರಾಗಿ ನೀಲನ್ ಡಿ ಸೋಜಾ ಅವಿರೋದವಾಗಿ ಐಕೆಯಾದರು, ಗೌರವಧ್ಯಕ್ಷ :ಪ್ರಕಾಶ ಶೆಟ್ಟಿ ಬರ್ಕೆ, ಉಪಾಧ್ಯಕ್ಷ ಗುರುಪ್ರಸಾದ್,ಕಾರ್ಯದರ್ಶಿ ರಾಜೇಶ್ ಪೂಜಾರಿ,ಕೋಶಾಧಿಕಾರಿ ಪ್ರಾಣೇಶ್ ನಾಯ್ಕ್, ಹಾಗೂ ಇತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರಿಕ್ಷಾ ಚಾಲಕರ-ಮಾಲಕರ ಸಂಘದ
ಪ್ರತಿ ಸದಸ್ಯರು ಸೇವಾ ನಿಧಿಯ ಮೂಲಕ ಹಣ ಸಂಗ್ರಹ ಮಾಡಿ ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡುತ್ತಿದ್ದಾರೆ.
ವಾರ್ಷಿಕ ಸಭೆಯಲ್ಲಿ :ಬಾಲಕೃಷ್ಣ ಕುಮ್ದೇಲ್ ಲೆಕ್ಕ ಪತ್ರ ಮಂದಿಸಿದರು, ಜಗದೀಶ್ ಶೆಟ್ಟಿ ಸ್ವಾಗತಿಸಿ ಚಂದ್ರಹಾಸ ನೆತ್ತರಕೆರೆ ಧನ್ಯವಾದವಿತ್ತರು.









