ಕೊಡ್ಮಾನ್ :ಕೆನರಾ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ.

Coastal Bulletin
ಕೊಡ್ಮಾನ್ :ಕೆನರಾ ಕಾಲೇಜಿನ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ.

ಬಂಟ್ವಾಳ :ಮಂಗಳೂರು ವಿಶ್ವ ವಿದ್ಯಾ ನಿಲಯ,ರಾಷ್ಟ್ರೀಯ ಸೇವಾ ಯೋಜನೆ, ಕೆನರಾ ಕಾಲೇಜು ಮಂಗಳೂರು ಇದರ ವಾರ್ಷಿಕ ವಿಶೇಷ ಶಿಬಿರವು ಬಂಟ್ವಾಳ ತಾಲೂಕಿನ ಕೊಡ್ಮಾಣ್ ಸರಕಾರಿ ಶಾಲೆಯಲ್ಲಿ ನಡೆಯುತ್ತಿದ್ದು ಈ ಪ್ರಯುಕ್ತ ಶಿಬಿರಾರ್ಥಿಗಳು ಕೊಡ್ಮಾಣ್ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.

ಮೇರಮಜಲು ಗ್ರಾ ಪಂ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ರಸ್ತೆಯ ಇಕ್ಕೆಳಗಳಲ್ಲಿ ಬಿಸಾಡಿರುವ ಕಸ ಕಡ್ಡಿ, ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಶುಚಿಗೊಳಿಸಿ,ಪ್ರಧಾನಿ ಮೋದಿಯವರ "ಸ್ವಚ್ಛ ಭಾರತ ಶ್ರೇಷ್ಠ ಭಾರತ"ಕಲ್ಪನೆಯ ಸ್ವಚ್ಛತೆಯ

ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಮೇರಮಜಲು ಗ್ರಾ ಪಂ ಅಧ್ಯಕ್ಷ ಸತೀಶ್ ನಾಯ್ಗ ಕೊಡ್ಮಾಣ್ ಕೋಡಿ, ಹರೀಶ್ ಕುಮಾರ್ ಕೊಡ್ಮಾಣ್, ದೇವದಾಸ ಕಂಬ್ಳಕೊಡಿ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು

Leave a Comment