ಜಾತಿ ಗಣತಿ ಬಹಿರಂಗ : ಕರ್ನಾಟಕದಲ್ಲಿ ದೊಡ್ಡ ಸಮುದಾಯಗಳೆನಿಸಿದ್ದ ಲಿಂಗಾಯತ,ಒಕ್ಕಲಿಗ ಸಮುದಾಯ ಯಾವ ಸ್ಥಾನದಲ್ಲಿದೆ?

Coastal Bulletin
ಜಾತಿ ಗಣತಿ ಬಹಿರಂಗ : ಕರ್ನಾಟಕದಲ್ಲಿ ದೊಡ್ಡ ಸಮುದಾಯಗಳೆನಿಸಿದ್ದ ಲಿಂಗಾಯತ,ಒಕ್ಕಲಿಗ ಸಮುದಾಯ ಯಾವ ಸ್ಥಾನದಲ್ಲಿದೆ?

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆ, ಅಪಸ್ಟರ, ಕೋಲಾಹಲ ಸೃಷ್ಟಿಸಲಿದೆ ಎನ್ನಲಾಗಿರುವ ಜಾತಿವಾರು ಜನಸಖ್ಯೆಯ ವಿವರಗಳನ್ನೊಳಗೊಂಡ 'ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ'ಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಗುರುವಾರ ಹಸ್ತಾಂತರ ಮಾಡಿದರು.

ಈ ವರದಿಯಲ್ಲಿ ಏನಿದೆ ಎಂಬ ಅಂಶ ಅಧಿಕೃತವಾಗಿ ಇನ್ನೂ ಬಹಿರಂಗಗೊಂಡಿಲ್ಲವಾದರೂ ಅಂಕಿ ಅಂಶಗಳು ಹೊರ ಬಿದ್ದಿವೆ. ಮೂಲಗಳ ಪ್ರಕಾರ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗ (ಅಹಿಂದ)ವು ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.60ರಷ್ಟು ಇದೆ. ಅದರಲ್ಲೂ ಅಲ್ಪಸಂಖ್ಯಾತ ಸಮುದಾಯವು ಇದುವರೆಗೂ ರಾಜ್ಯದ ಅತಿ ದೊಡ್ಡ ಸಮುದಾಯಗಳೆನಿಸಿದ್ದ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗಿಂತ ಹೆಚ್ಚಿದೆ. ಬಹಿರಂಗಗೊಂಡಿರುವ ಅಂಕಿ-ಅಂಶ ಪ್ರಕಾರ ಮುಸ್ಲಿಮರು 70 ಲಕ್ಷ ಲಿಂಗಾಯತರು 65 ಲಕ್ಷ, ಒಕ್ಕಲಿಗರು 60 ಲಕ್ಷ ಈ  ಮೂಲಕ ರಾಜ್ಯದಲ್ಲಿ ಅಲ್ಪಸಂಖ್ಯಾತರು ಪ್ರಬಲ ಸಮುದಾಯಗಳಿಗೆ ಹೋಲಿಸಿದಾಗ ಬಹುಸಂಖ್ಯಾತರಾಗುತ್ತಾರೆ.

ರಾಜ್ಯದಲ್ಲಿರುವ 5.98 ಕೋಟಿ ಜನಸಂಖ್ಯೆಯ ಪೈಕಿ 3.96 ಕೋಟಿ ಜನರು ಅಹಿಂದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1.87 ಕೋಟಿ ಜನ ಲಿಂಗಾಯಿತ, ಒಕ್ಕಲಿಗ, ಬ್ರಾಹ್ಮಣ ಹಾಗೂ ಇತರ ಸಮುದಾಯದವರಾಗಿದ್ದಾರೆ. ಪರಿಶಿಷ್ಟಜಾತಿಯ 1.08 ಕೋಟಿಜನ, ಪರಿಶಿಷ್ಟ ಪಂಗಡ 40.45 ಲಕ್ಷ ಜನ ಇದ್ದರೆ, ಹಿಂದುಳಿದ ಸಮುದಾಯಕ್ಕೆ

ಸೇರಿದ ಕುರುಬರು 45 ಲಕ್ಷ ಜನರಿದ್ದಾರೆ. 

ಒಟ್ಟು 816 ಇತರ ಹಿಂದುಳಿದ ಜಾತಿಗಳನ್ನು ಗುರುತಿಸಲಾಗಿದೆ. 1,351 ಜಾತಿಗಳನ್ನು ಸಮೀಕ್ಷೆಯಡಿ ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಹೊಸದಾಗಿ 192 ಜಾತಿಗಳನ್ನ ದಾಖಲಿಸಲಾಗಿದೆ. 10ಕ್ಕಿಂತ ಕಡಿಮೆ ಜನಸಂಖ್ಯೆ ಇರುವ 80 ಜಾತಿಗಳ ಹೆಸರನ್ನು ವರದಿಯಲ್ಲಿ ದಾಖಲಿಸಲಾಗಿದೆ. ಸುಮಾರು 30 ಜಾತಿಗಳು ಅತ್ಯಂತ ಹಿಂದುಳಿದ ಜಾತಿ ವರ್ಗದಡಿ ಸೇರಲಿವೆ ಎಂದು ತಿಳಿದು ಬಂದಿದೆ. ಜಾತಿಗಣತಿ ವರದಿಯ ಪ್ರಕಾರ ಒಟ್ಟು 5.98 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, 32 ಲಕ್ಷ ಜನ ಸಮೀಕ್ಷೆಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. 

ಆಯೋಗದ ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಯವರೊಂದಿಗೆ ಆಗ ಮಿಸಿದ ಮಿಸಿದಹ ಹೆಗ್ಡೆಯವರು, 200 ಪುಟಗಳ ಪ್ರಧಾನ ವರದಿ ಮತ್ತು 48 ಸಂಪುಟಗಳ ದತ್ತಾಂಶ ಇರುವ ಎರಡು ಪೆಟ್ಟಿಗೆಗಳ ವರದಿಯನ್ನು ವಿಧಾನಸೌಧದಲ್ಲಿನ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಹಸ್ತಾಂತರಿಸಿದರು. ವರದಿ ಯನ್ನು ಸರ್ಕಾರ ಮುಂದಿನ ಸಚಿವ ಸಂಪುಟ ದಲ್ಲೇ ಮಂಡಿಸುವ ಸಾಧ್ಯತೆ ಇದೆ.

Leave a Comment