Coastal Bulletin

ರೋಟರಿ ಕ್ಲಬ್ ಬಂಟ್ವಾಳ ಟೌನ್ ವತಿಯಿಂದ ಹೊಸ ವರ್ಷದ ಆಚರಣೆಯ ಸಲುವಾಗಿ ಡಿ.ರಂದು ಬಿಸಿ ರೋಡಿನ ಕುಲಾಲ ಭವನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಿರಿಯ ಪತ್ರಕರ್ತ ವೆಂಕಟೇಶ್ ಬಂಟ್ವಾಳ ಮತ್ತು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ ಮತ್ತು ಖ್ಯಾತ ಚಿತ್ರ ಕಲಾವಿದ ರೋ ಮನೋಜ್ ಕನಪಾಡಿ ಮತ್ತು ಹೆಣ್ಣು, ಗಂಡು ಸ್ವರದಲ್ಲಿ ಏಕ ಕಾಲದಲ್ಲಿ ಹಾಡುವ ಕಲಾವಿದ ರಾಜೇಶ್ ಸಜೀಪ ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷರಾದ ರೋ PHF ಚಿತ್ತರಂಜನ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ರೋ ಪ್ರಕಾಶ್ ಕಾರಂತ್, ಉಪ ಗವರ್ನರ್ ರೋ ಮಂಜುನಾಥ್ ಆಚಾರ್ಯ ಮತ್ತು ಎಲ್ಲಾ ಸದಸ್ಯರೂ ಉಪಸ್ಥಿತಿ ಇದ್ದರು,24/25ನೆ ಸಾಲಿನ ಅಧ್ಯಕ್ಷರಾಗಿ ರೋ PHF ಕಿಶೋರ್ ಕುಮಾರ್ ಸರ್ವಾನುಮತದಿಂದ

ಆಯ್ಕೆ ಮಾಡಲಾಯಿತು.

ತಿಂಗಳ ವರದಿ ಮತ್ತು ಧನ್ಯವಾದವನ್ನು ಕಾರ್ಯದರ್ಶಿ ರೋ ಉಮೇಶ್ ಆರ್ ಮೂಲ್ಯ ಹೇಳಿದರು, ರಾಷ್ಟ್ರ ಗೀತೆಯೊಂದಿಗೆ ಸಭೆಯನ್ನು ಫೆಲೋಶಿಪ್ ಡಿನ್ನರ್ ಗೆ ಮುಂದೂಡಲಾಯಿತು, ವೇದಿಕೆಯಲ್ಲಿ ಅನೆಟ್ಸ್ ಮತ್ತು ಆನ್ಸ್ ನವರಿಂದ ನೃತ್ಯ ಮತ್ತು ರಸಮಂಜರಿ ಕಾರ್ಯಕ್ರಮ ನಡೆಸಿ ಸದಸ್ಯರು ಹೊಸ ವರ್ಷವನ್ನು ವಿಜೃಂಭಣೆಯಿಂದ ಆಚರಿಸಿದರು.

Leave a Comment