ಸತೀಶ್ ನೆತ್ತರಕೆರೆ-ದುಬೈ

ರಾತ್ರಿ ಕುಡಿದದ್ದು ಕುಣಿದದ್ದು ಮರೆಯಲೆಂದುಕೊಂಡು ಕಳೆದ ವರ್ಷದಲ್ಲಿನ ಹೇಳಲಾಗದ ಕಹಿ ನೆನಪು ಹಳೆನೋವು ಆದರೆ ಆದದ್ದೇ ಬೇರೆ ಮರುದಿನ ಜೊತೆಗೆ ಏಳಲಾಗದ ಹಾಗೆ ವಿಪರೀತ ತಲೆ ನೋವು.

ಕಳೆದ ವರ್ಷದಲ್ಲಿ

ಏನೆಲ್ಲಾ

ಬದಲಾಗಬೇಕೆಂದು 

ಕೊಂಡರೂ...

ಕೊನೆಗೆ ಬದಲಾಗಿದ್ದೊಂದೇ

ಹಳೆಯ ಕ್ಯಾಲೆಂಡರು ..!


ಎಂದಿನಂತೆ ಹೊಸವರ್ಷಕ್ಕೆ

ಹೊಸ ನಿರ್ಧಾರ ತೆಗೆದು

ಕೊಂಡಿದ್ದೇನೆ

ಮೊದಲನೆಯದಾಗಿ

ಹೊಸ ಕ್ಯಾಲೆಂಡರ್

ತೆಗೆದು ಕೊಂಡಿದ್ದೇನೆ !


ಕಾಲಚಕ್ರ ಮರಳಿ ಮತ್ತೊಂದು ಸುತ್ತು ಉರುಳಿ

ಹಳೆಯ ವರುಷ ಹೋಯಿತು ನೆನಪ ಬಿಟ್ಟು

ತೆರಳಿ

ಹೆಜ್ಜೆಯಿಟ್ಟು ಬಂದಿಹುದು ಎರಡು ಸಾವಿರದ ಇಪ್ಪತ್ತ ಮೂರು

ಕಾಲಗರ್ಭದಲ್ಲಿ ಹುದುಗಿರುವ ನಾಳೆಗಳ ತಿಳಿದವರು ಯಾರು..!

ಕಂಡ ಜೀವನದ ಕನಸುಗಳೆಲ್ಲ ಇಲ್ಲಿ ಕೈಗೂಡಲಿ

ಈ ವರುಷ ಹೊಸ ಹರುಷ ತರಲಿ ಎಲ್ಲರೆದೆಗೂಡಲಿ..

Leave a Comment