ಬಂಟ್ವಾಳ : ವಿವೇಕಾನಂದರ ವೇಷ ಭೂಷಣ ಗಳೊಂದಿಗೆ ವಿವೇಕಾನಂದರ ಕೆಲವು ವಾಣಿಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿ ವಿವೇಕಾನಂದರ ಜಯಂತಿಯನ್ನು ನಲ್ಕೆಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅಮ್ಟಾಡಿ ಗ್ರಾಮ ಪಂಚಾಯತ್ ಆಧ್ಯಕ್ಷೆ ಮೋಹಿನಿ ಉಪಾಧ್ಯಕ್ಷ, ಸುನಿಲ್, ಅಭಿವೃದ್ದಿ ಅಧಿಕಾರಿ ರವಿಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು.
ಶಾಲಾಬಿವೃದ್ದಿ ಸಮಿತಿ ಅಧ್ಯಕ್ಷ
ವಿಜಯಕುಮಾರ್ ಆದ್ಯಕ್ಷತೆ ವಹಿದ್ದರು. ಮುಖ್ಯ ಶಿಕ್ಷಕಿ ಜ್ಯೋತಿ ಕುಮಾರಿ ಉಪಸ್ಥಿತರಿದ್ದರು.
ಸಹಶಿಕ್ಷಕಿಯರಾದ ಶಶಿಕಲಾ, ರೇಖಾ ರಾವ್, ಮೋಹಿನಿ, ಮಮತಾ, ಜಗನ್ನಾಥ್ , ಸೌಮ್ಯ, ಅಕ್ಷತಾ ಕಾರ್ಯಕ್ರಮಕ್ಕೆ ಸಹಕರಿಸಿದ್ದರು.














