ಬಂಟ್ವಾಳ :ಹಿಂದೂ ಜಾಗರಣ ವೇದಿಕೆ ಶ್ರೀರಾಮ ಘಟಕ ಶ್ರೀರಾಮನಗರ ಬೆಂಜನಪದವು ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ವೈವಿದ್ಯೆ ಕಾರ್ಯಕ್ರಮವು ಡಿ.2ರಂದು ಶನಿವಾರ ಸಂಜೆ 5ರಿಂದ ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ರಾಮನಗರದ ಮೈದಾನದಲ್ಲಿ ನಡೆಯಿತು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಮೇಶ್ ಬಿ, ಧರ್ಮದರ್ಶಿ ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಇವರು ವಹಿಸಿದ್ದರು.
ಅಥಿತಿಗಳಾಗಿ ನಾರಾಯಣ ಹೊಳ್ಳ ನೆತ್ರಕೆರೆ ಗುತ್ತು, ಸ್ಥಾಪಕರು,ಶ್ರಾವ್ಯ ಗೋಕುಲ ಗೋ ಮಂದಿರ, ಹೊಳ್ಳರಬೈಲು, ದೇವಿಪ್ರಸಾದ್ ಶೆಟ್ಟಿ ವಿಭಾಗ ಕಾರ್ಯದರ್ಶಿ ವಿ ಹಿಂ ಪ ಮಂಗಳೂರು, ಉದ್ಯಮಿ ಭುವನೇಶ್ ಪಚ್ಚಿನಡ್ಕ, ನರಸಿಂಹ ಮಾಣಿ ಹಿಂ ಜಾ ವೇ ಜಿಲ್ಲಾ ಸಂಯೋಜಕ್, ವಿಜಯ ಕೆ. ಧರ್ಮದರ್ಶಿ, ಕೊರಗಜ್ಜ ಕ್ಷೇತ್ರ ಬೆಂಜನಪದವು ಉಷಾ ಮನೋಜ್ ಶರ್ಮಾ,ಮಾಲಕರು ಉಷಾಸ್ ಗ್ರೂಪ್' ಬ್ಯೂಟಿ ಪಾರ್ಲರ್, ಹರೀಶ್ ತಲೆಂಬಿಲ ಹಿಂ ಜಾ ವೇ ತಾ. ಸಂಯೋಜಕ್, ಸಂತೋಷ್ ಪೊಳಲಿ ಹಿಂದೂ ಮುಖಂಡರು, ಬೀರಣ್ಣ ಆತಾರ್ ಶ್ರೀ ಭಗವತೀ ಕ್ಷೇತ್ರ ಕುದ್ರೋಳಿ, ರೂಪೇಶ್ ಕುಮಾರ್ ಕೂರಿಯಾಳ,ಹಿಂದೂ
ಮುಖಂಡರು, ಜಗದೀಶ್ ನೆತ್ತರಕೆರೆ ನಿಕಟಪೂರ್ವ ಜಿಲ್ಲಾಧ್ಯಕ್ಷ ಹಿಂ ಜಾ ವೇ ಪುತ್ತೂರು, ಸುರೇಶ್ ನಡುಬೈಲ್,ಅಧ್ಯಕ್ಷರು, ಹಿಂದೂ ಜಾಗರಣ ವೇದಿಕೆ ಕಲಾ ಸಂಗಮ ಘಟಕ ನಡುಬೈಲು, ದಾಮೋದರ ತುಂಗ, ಉದ್ಯಮಿ ಬೆಂಜನಪದವು ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ನಾರಾಯಣ ಹೊಳ್ಳ ನೆತ್ರಕೆರೆ ಗುತ್ತು, ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು, ವಿಜಯ ಕೆ. ಧರ್ಮದರ್ಶಿ, ಕೊರಗಜ್ಜ ಕ್ಷೇತ್ರ ಬೆಂಜನಪದವು ಮತ್ತು ರಮೇಶ್ ಬಿ, ಧರ್ಮದರ್ಶಿ ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವು ಅವರನ್ನು ಗೌರವಿಸಲಾಯಿತು.
ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಮತ್ತು ಸುರೇಶ ಎಸ್ ನಾವೂರ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಹಾಗೂ ಬೊಳ್ಳಿ ಮಲೆತ ಶಿವ ಶಕ್ತಿಲು ಎಂಬ ತುಳು ಪೌರಾಣಿಕ ನಾಟಕ ನಡೆದು ಜನ ಮೆಚ್ಚುಗೆ ಗಳಿಸಿತು.














