ಬಂಟ್ವಾಳ :ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ , ಗ್ರೇಸ್ ಪಾಲಿ ಕ್ಲಿನಿಕ್ ಲೋರೆಟ್ಟೋ ಪದವು , ಏ ಜೆ ಹಾಸ್ಪಿಟಲ್ ಮಂಗಳೂರು ಇದರ ತಜ್ಞ ವೈದ್ಯರಿಂದ ಉಚಿತ ಸಾರ್ವಜನಿಕ ವೈದ್ಯಕೀಯ ಶಿಬಿರ ಬಂಟ್ವಾಳ ಲೋರೆಟ್ಟೋ ಪದವು ಗ್ರೇಸ್ ಕಮರ್ಷಿಯಲ್ ರೆಸಿಡೆನ್ಸಿ ಬಿಲ್ಡಿಂಗ್ ನಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಲೋರೆಟ್ಟೋ ಚರ್ಚ್ ನ ಧರ್ಮಗುರು ರೆ.ಫಾ. ಪ್ರಾನ್ಸಿಸ್ ಕ್ರಾಸ್ತಾ ಉದ್ಘಾಟಿಸಿ ಇಂದು ಎಲ್ಲರಿಗೂ ಆರೋಗ್ಯದ ಪ್ರಾಮುಖ್ಯತೆ ಅರಿವಾಗಿದೆ.ಇಂಥ ಶಿಬಿರಗಳ ಮೂಲಕ ಜನತೆ ಆರೋಗ್ಯದ ಜಾಗೃತಿ ಆಗಬೇಕು.ಸಮಾರಂಭದ ಅಧ್ಯಕ್ಷತೆಯನ್ನು ವಾಲ್ ಸ್ಟೈಲ್ ಬಿಲ್ಡರ್ ಲೋರೆಟ್ಟೋ ಪದವಿನ ಜೋಸ್ಸಿ ಲೋಬೊ, ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರದ ವೈದ್ಯರು ಡಾಕ್ಟರ್ ಚೇತನ್ ರಾಜ್ ಕುಲಾಲ
ಹಿರಿಯ ನಾಗರಿಕರ ಸಂಘದ ಸೋಮಯ್ಯ ಹನೈನಡೆ, ನಿರ್ಮಲ ಕಾನ್ವೆಂಟ್ ನ ಸಿಸ್ಟರ್ ಇಡೋಲಿನ್ ರೊಡ್ರಿಗಸ್, ಯುವ ವೇದಿಕೆ ಬಂಟ್ವಾಳದ ಅಧ್ಯಕ್ಷರಾದ ನಿತೀಶ್ ಕುಲಾಲ್ ಪಲ್ಲಿಕಂಡ ಉಪಸ್ಥಿತರಿದ್ದರು.
ಶಿಬಿರದಲ್ಲಿ ಖಾಯಿಲೆ ಸಂಭಂದಿ ಪರೀಕ್ಷೆ ಮಾಡಲಾಯಿತು.ಉಚಿತ ಕನ್ನಡಕ ವಿತರಣೆ, ರಿಯಾಯಿತಿ ದರದಲ್ಲಿ ಔಷಧಿ ನೀಡಲಾಯಿತು. ಸುಮಾರು 250 ಕ್ಕೂ ಫಲಾನುಭವಿಗಳು ಇದರ ಪ್ರಯೋಜನ ಪಡೆದರು. ವಿನ್ಸೆಂಟ್ ಸ್ವಾಗತಿಸಿ ಟಿ. ಶೇಷಪ್ಪ ಮೂಲ್ಯ ವಂದಿಸಿದರು
















