Coastal Bulletin

ಬಂಟ್ವಾಳ :ತಾಲ್ಲೂಕಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜೆಡಿಎಸ್ ಮುಸ್ಲಿಂ ನಾಯಕರ ಸಮಾಲೋಚನಾ ಸಭೆಯನ್ನು ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಕುಂಞಿ ಉದ್ಘಾಟಿಸಿದರು.

 ರಾಜ್ಯದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಾಕಷ್ಟು ಮಂದಿ ಅಲ್ಪಸಂಖ್ಯಾತ ನಾಯಕರನ್ನು ಬೆಳೆಸಿ ಅವರಿಗೆ ಸೂಕ್ತ ಅವಕಾಶ ನೀಡಿದ್ದಾರೆ. ಕಾಂಗ್ರೆಸ್ಗಿಂತಲೂ ಹೆಚ್ಚಿನ ಸ್ಥಾನಮಾನ ಜೆಡಿಎಸ್ನಲ್ಲಿ ಮುಸ್ಲಿಂ ಸಮುದಾಯಕ್ಕೆ ಸಿಕ್ಕಿದೆ ಎಂದು ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಕುಂಞಿ ಹೇಳಿದ್ದಾರೆ. ಇಲ್ಲಿನ ಬಿ.ಸಿ.ರೋಡು ಲಯನ್ಸ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜೆಡಿಎಸ್ ಮುಸ್ಲಿಂ ನಾಯಕರ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಕಾಂಗ್ರೆಸ್ನಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಬೃಹತ್ ಸಮಾವೇಶ ನಡೆಸುವ ಮೂಲಕ ನಾವು ಸಂಘಟಿತರಾಗಿ ಮುಸ್ಲಿಂ ಸಮಾಜಕ್ಕೆ ಆಗುವ ಅನ್ಯಾಯ ತಡೆಯೋಣ ಎಂದರು. 

ರಾಜ್ಯ ಮಾಜಿ

ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ಈ ಬಗ್ಗೆ ಶೀಘ್ರವೇ ಮಾಜಿ ಮುಖ್ಯಮಂತ್ರಿ ಬಳಿ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಮೊಹಮ್ಮದ್ ಶಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ನಗರಸಭಾ ಸದಸ್ಯರಾದ ಖಲೀಲ್ ಉಳ್ಳಾಲ, ಜಬ್ಬಾರ್ ಉಳ್ಳಾಲ, ಬಶೀರ್ ಉಳ್ಳಾಲ, ಕುಪ್ಪೆಪದವು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಪಿ.ಅಮ್ಮಬ್ಬ, ಸದಸ್ಯ ರಿಯಾಜ್, ಹಿರಿಯ ಮುಖಂಡ ಅಶ್ರಫ್ ಕೊಝಿಕಾನ್, ಹೈದರ್ ಪರ್ತಿಪ್ಪಾಡಿ, ಅಝೀಝ್ ಮಲಾರ್, ಇಕ್ಬಾಲ್ ಮುಲ್ಕಿ, ಇಕ್ಬಾಲ್ ಎಲಿಮಲೆ, ಅಶ್ರಫ್ ಕಲ್ಲೇಗ, ಲತೀಫ್ ವಳಚ್ಚಿಲ್, ಅಬೂಬಕ್ಕರ್ ಅಮ್ಮುಂಜೆ ಉಪಸ್ಥಿತರಿದ್ದರು.ಹಾರೂನ್ ರಶೀದ್ ಬಂಟ್ವಾಳ ಸ್ವಾಗತಿಸಿ, ಸವಾದ್ ವಂದಿಸಿದರು. 

Leave a Comment