ಬಂಟ್ವಾಳ :ತುಂಬೆ ಗ್ರಾಮ ಪಂಚಾಯತ್ ಹಾಗೂ ಪ್ರಕೃತಿ ಸಂಜೀವಿನಿ ಒಕ್ಕೂಟ ತುಂಬೆ ವತಿಯಿಂದ ಡಿ.31 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬಟ್ಟೆ ಕೈ ಚೀಲಗಳ ಬಿಡುಗಡೆ ಸಮಾರಂಭ ನಡೆಯಲಿದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಪರಿಸರ ಸಂರಕ್ಷಣೆಯ ಕಾಳಜಿಯಿಂದ ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಲು ಪಣತೊಟ್ಟಿದ್ದು , ಪ್ರಕೃತಿ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಂದ ಸ್ವ ಉದ್ಯೋಗ ಕಲ್ಲಿಸುವ ಉದ್ದೇಶದಿಂದ ಈ ಬಟ್ಟೆ ಕೈ ಚೀಲಗಳ
ತಯಾರಿಕೆ ಆಗುತ್ತಿದೆ.
ಈ ಕಾರ್ಯಕ್ರಮಕ್ಕೆ ಸಚಿವರು, ಶಾಸಕರು, ದಾನಿಗಳು,ಅಧಿಕಾರಿಗಳು, ಊರ ಗಣ್ಯರು, ಭಾಗವಹಿಸಲಿದ್ದು, ಸಾಧಕರಿಗೆ ಸನ್ಮಾನ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ ಎಂದು ಪಂ ಅಧ್ಯಕ್ಷ ಪ್ರವೀಣ್ ಬಿ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ














