ಮಂಗಳೂರು: ಅನುಶ್ರೀಯವರು ಡ್ರಗ್ಸ್ ಪಾರ್ಟಿ ಮಾಡಿದ್ದಾರೆಂದು ನಾನು ಹೇಳಿಕೆಯನ್ನು ನೀಡಿಲ್ಲ. ಚಾರ್ಜ್ ಶೀಟ್ ನಲ್ಲಿ ಇರುದೆಲ್ಲವೂ ಸಂಪೂರ್ಣ ಸುಳ್ಳು ಎಂಬ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯಿಂದ ಪ್ರಕರಣಕ್ಕೆ ಮಹತ್ತರವಾದ ಟ್ವಿಸ್ಟ್ ದೊರಕಿದೆ.
ಅನುಶ್ರೀಗೂ ಡ್ರಗ್ಸ್ ಕೇಸ್ ಗೂ ಯಾವುದೇ ಸಂಬಂಧ ಇಲ್ಲ. ನಾವು ಯಾವುದೇ ಡ್ರಗ್ಸ್ ಪಾರ್ಟಿ ಮಾಡಿಲ್ಲ. ಅನುಶ್ರೀ ಅಂತಹ ಹುಡುಗಿಯೂ ಅಲ್ಲ. ಅನುಶ್ರೀ ಜೊತೆ ಡ್ರಿಂಕ್ಸ್, ಡ್ರಗ್ಸ್ ಪಾರ್ಟಿ ಮಾಡಿಲ್ಲ ಎಂದು ಹೇಳಿದ್ದಾರೆ.
ನಾನು ಅನುಶ್ರೀಗೆ ಕೇವಲ ಕೊರಿಯೋಗ್ರಾಫ್ ಮಾಡುತ್ತಿದ್ದೆ, ಹೊರತು ಅನುಶ್ರೀಯವರ ಜೊತೆಗೆ ಬೇರೆ ಯಾವುದೇ ಸಂಬಂಧವಿಲ್ಲ. ಈಗ ಹಬ್ಬಿರುವ ಸುಳ್ಳು ವಿಚಾರದ ಹಿಂದೆ ಬೇರೆ ಯಾರೋ ಇರಬಹುದು. ನಾನು ಎರಡು ಬಾರಿ ಡ್ರಗ್ಸ್ ತೆಗೆದುಕೊಂಡಿದ್ದೇನೆ. ಈಗ ಪ್ರತಿ ತಿಂಗಳು ಕೋರ್ಟ್ ಗೆ ಹಾಜರಾಗುತ್ತಿದ್ದೇನೆ ಎಂದು ಕಿಶೋರ್ ಅಮನ್ ಶೆಟ್ಟಿ ಹೇಳಿದರು.
ನನಗೂ ಅನುಶ್ರೀಗೂ ಯಾವುದೇ ರೀತಿಯ ಸಂಪರ್ಕ ಇಲ್ಲ. ಕುಣಿಯೋಣ ಬಾರಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪರಿಚಯ ಆಗಿದೆ. 2009ರಲ್ಲಿ ಡ್ಯಾನ್ಸ್ ಗೆ ಕೊರಿಯೋಗ್ರಾಫ್ ಮಾಡಿದ್ದೇ ಅದೇ ಮೊದಲು ಮತ್ತು ಕೊನೆ.
ಬಳಿಕ 4-5 ವರ್ಷಗಳ ಹಿಂದೆ ಮಂಗಳೂರಲ್ಲಿ ನಡೆದ ಡ್ಯಾನ್ಸ್ ಕ್ಲಾಸ್ ಕಾರ್ಯಕ್ರಮದಲ್ಲಿ ನಾವು ಭೇಟಿಯಾಗಿದ್ದೆವು. ಬಳಿಕ ನಾವಿಬ್ಬರು ಎಲ್ಲೂ ಭೇಟಿಯಾಗಿಲ್ಲ, ಫೋನ್ ಸಂಪರ್ಕವೂ ಇಲ್ಲ. ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ಇದೆಲ್ಲವೂ ಸುಳ್ಳು ಆರೋಪ ಎಂದರು.
ನನ್ನ ಲೈಫ್ ಹಾಳು ಮಾಡುತ್ತಿದ್ದಾರೆ. ಯಾರು ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ. ಒಳ್ಳೆಯ ಕೊರಿಯೋಗ್ರಾಫರ್ ಆಗಬೇಕೆಂಬ ಕನಸು ನನಗಿದೆ ಅದನ್ನು ಈಡೇರಿಸವಲ್ಲಿ ನಿರತನಾಗಿದ್ದೇನೆ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಹುಟ್ಟಿದಾಗಿನಿಂದ ತಪ್ಪು ಮಾಡಿಲ್ಲ. ಯಾರು ಈ ರೀತಿ ಮಾಡುತ್ತಾರೋ ಅವೆರಿಗೆ ಒಳ್ಳೆಯದಾಗಲಿ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪಾರ್ಟಿಗೆ ಹೋಗುತ್ತಿದ್ದೇನೆ, ಆದರೆ ಡ್ರಗ್ಸ್ ಪಾರ್ಟಿಗಳಿಗೆಲ್ಲ ಹೋಗಿಲ್ಲ. ಡ್ರಗ್ಸ್ ಸೇವನೆ ಎರಡು ಬಾರಿ ಮಾಡಿದ್ದೇನೆ. ಆದರೆ ಪೆಡ್ಲಿಂಗ್- ಗಿಡ್ಲಿಂಗ್ ಎಲ್ಲ ಮಾಡಿಲ್ಲ ಎಂದರು.















