Coastal Bulletin

ಮಂಗಳೂರು: ಕೋವಿಡ್‌ ಅಲೆ ನಿಯಂತ್ರಿಸಲಾಗದೆ ಹೆಣಗಾಡುತ್ತಿರುವ ಕೇರಳದಲ್ಲಿ 'ನಿಪಾ ವೈರಸ್' ಪತ್ತೆಯಾಗಿದೆ. ಹಿನ್ನೆಲೆಯಲ್ಲಿ, ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದೆ. ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದೆ.

ಗಡಿ ಭಾಗದಿಂದ ಸಾಕಷ್ಟು ಜನರು ಆರೋಗ್ಯ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಂಗಳೂರನ್ನೇ ಆಶ್ರಯಿಸಿರುವ ಕಾರಣ  ಜಿಲ್ಲೆಯಲ್ಲಿ ನಿಪಾ ಅಲರ್ಟ್‌ ಘೋಷಿಸಲಾಗಿದ್ದು ಸಂಬಂಧಪಟ್ಟವರು ತತ್‌ಕ್ಷಣದಿಂದ ಮುಂಜಾಗ್ರತಾ ಕ್ರಮ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಶಂಕಿತ ಪ್ರಕರಣ ಕಂಡುಬಂದರೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಕೇರಳದಲ್ಲಿ 12 ವರ್ಷದ

ಬಾಲಕನೊಬ್ಬ ನಿಪಾ ವೈರಸ್‌ ಸೋಂಕಿಗೆ ಬಲಿಯಾಗಿದ್ದು, ಆತನಿಗೆ ಚಿಕಿತ್ಸೆ ನೀಡಿ​ದ್ದ ಇಬ್ಬರು ವೈದ್ಯ​ರಿಗೂ ಸೋಂಕು ತಾಗಿ​ದೆ. ಹೀಗಾಗಿ ರಾಜ್ಯದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಸೋಂಕಿಗೀಡಾದ ಬಾವಲಿಗಳು ತಿಂದು ಬಿಟ್ಟಹಣ್ಣನ್ನು ಅನ್ಯ ಪ್ರಾಣಿ ಅಥವಾ ಮನುಷ್ಯರು ಸೇವಿಸಿದಾಗ ನಿಪಾ ವೈರಸ್‌ ಅಂಟುತ್ತದೆ. ಜೊಲ್ಲು, ಉಗುಳಿನ ಮೂಲಕ ಇತರರಿಗೆ ಹರಡುತ್ತದೆ.

Leave a Comment