ತಿರುವನಂತಪುರ: ಮಲಯಾಳಂ ಖ್ಯಾತ ಚಿತ್ರ ನಟಿ ಶರಣ್ಯಾ ಶಶಿ ಅವರು ನಿಧನರಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕ್ಯಾನ್ಸರ್, ಬ್ರೇನ್ ಟ್ಯೂಮರ್ ವಿರುದ್ಧ ಹೋರಾಡುತ್ತಿದ್ದ 35 ವರ್ಷ ವಯಸ್ಸಿನ ಶರಣ್ಯಾ ನಿನ್ನೆ ಕೊನೆಯುಸಿರೆಳೆದಿದ್ದಾರೆ.
ಮೇ 23ರಂದು ಶರಣ್ಯಾ ಅವರಲ್ಲಿ ಕರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಹಲವು ದಿನಗಳ
ಕಾಲ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಜೂನ್‌ನಲ್ಲಿ ಐಸಿಯುನಿಂದ ಜನರಲ್ ವಾರ್ಡ್‌ಗೆ ವರ್ಗಾಯಿಸಿದ ಬಳಿಕ ಮತ್ತೆ ಪರಿಸ್ಥಿತಿ ಬಿಗಡಾಯಿಸಿತ್ತು.ನಿನ್ನೆ ಚಿಕಿತ್ಸೆ ಫಲಿಸದೆ ಶರಣ್ಯಾ ಇಹಲೋಕ ತ್ಯಜಿಸಿದರು.
















